
ಚಿಕ್ಕಬಳ್ಳಾಪುರ ಜೂನ್ 5, 2025:
ಕೆ.ಆರ್.ಪುರಂನ ಎಸ್.ಈ.ಎ ವಿಜ್ಞಾನ, ವಾಣಿಜ್ಯ ಮತ್ತು ಕಾಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ವಿಶ್ವ ಪರಿಸರ ದಿನವನ್ನು ಹಮ್ಮಿಕೊಂಡು ವಿಶಿಷ್ಟವಾಗಿ ಆಚರಿಸಲಾಯಿತು. ಗುಟ್ಟಹಳ್ಳಿಯಲ್ಲಿ ಜರುಗಿದ ಈ ಕಾರ್ಯಕ್ರಮವು ಪರಿಸರದ ಮಹತ್ವವನ್ನು ಪ್ರತಿಪಾದಿಸುತ್ತ, ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿ:
ಮಸ್ತಾನ್ ಅಲಿ, ಮುಖ್ಯಪ್ರಾಧ್ಯಾಪಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗುಟ್ಟಹಳ್ಳಿ
ಚುಂಚು ಚಂದ್ರನ್, ಉಪನ್ಯಾಸಕರು, ಎಸ್.ಈ.ಎ ಕಾಲೇಜು
ನರಸಿಂಹಪ್ಪ ಬಿ.ಎಮ್., ಮುಖ್ಯಸ್ಥರು, ಸಮಾಜ ಕಾರ್ಯ ವಿಭಾಗ
ವಸಂತ್ ಕುಮಾರ್ ಎಚ್.ಆರ್., ಉಪನ್ಯಾಸಕರು, ಸಮಾಜ ಕಾರ್ಯ ವಿಭಾಗ
ಶ್ರೀಮತಿ ಮಮತಾ ವಿ, ಉಪನ್ಯಾಸಕಿ, ಸಮಾಜ ಕಾರ್ಯ ವಿಭಾಗ
ಶ್ಯಾಮಸುಂದರ್, ಉಪನ್ಯಾಸಕರು, ಸಮಾಜ ಕಾರ್ಯ ವಿಭಾಗ
ಕಾರ್ಯಕ್ರಮವನ್ನು ಉದ್ಘಾಟಿಸಿದ ನರಸಿಂಹಪ್ಪ ಬಿ.ಎಮ್. ಅವರು ಮಾತನಾಡುತ್ತಾ, “ಪರಿಸರ ಉಳಿವಿಲ್ಲದೆ ನಮ್ಮ ಭವಿಷ್ಯ ಭದ್ರವಲ್ಲ. ಪರಿಸರದ ಕಾಳಜಿಯು ಕೇವಲ ಸಂಭ್ರಮದ ದಿನಗಳಲ್ಲದೆ ಪ್ರತಿದಿನವೂ ಇರುವುದು ಅತ್ಯಗತ್ಯ” ಎಂದು ಅಭಿಪ್ರಾಯಪಟ್ಟರು.
ಮಸ್ತಾನ್ ಅಲಿ ಅವರು “ಪ್ರತಿಯೊಬ್ಬ ವಿದ್ಯಾರ್ಥಿಯು ಗಿಡ ನೆಡುವ ಮೂಲಕ ನೈಸರ್ಗಿಕ ಸಮತೋಲನಕ್ಕೆ ಸಹಕಾರ ನೀಡಬೇಕು. ಇದು ಮುಂದಿನ ಪೀಳಿಗೆಗೆ ನಾವು ಬಿಟ್ಟುಕೊಡುವ ಕೊಡುಗೆ” ಎಂದು ಹೇಳಿದರು.

ಚುಂಚು ಚಂದ್ರನ್ ಅವರು ಪರಿಸರದ ನಾಶಕ್ಕೆ ಕಾರಣವಾಗುತ್ತಿರುವ ಮಾಲಿನ್ಯ ಮತ್ತು ಮಾನವನ ಉದ್ದೇಶಪೂರ್ವಕ ಪರಿಸರ ಶೋಷಣೆಯ ವಿರುದ್ಧವಾದ ಗಂಭೀರ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಗುಟ್ಟಹಳ್ಳಿಯ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರಪಾಲನೆಯ ಮಹತ್ವವನ್ನು ಮನವರಿಕೆ ಮಾಡಿಕೊಡಲು ಜಾತ (ರ್ಯಾಲಿ) ನಡೆಸಲಾಯಿತು. ಈ ಮೂಲಕ ‘ಪರಿಸರ ಸಂರಕ್ಷಣೆ’ ಎಂಬ ಘೋಷಣೆಯೊಂದಿಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಯಿತು.
ವಸಂತ್ ಕುಮಾರ್ ಎಚ್.ಆರ್., ಮಮತಾ ವಿ ಮತ್ತು ಶ್ಯಾಮಸುಂದರ್ ಅವರು ಸಹ ಈ ಕಾರ್ಯಾಚರಣೆಯಲ್ಲಿ ತಮ್ಮ ಹಾತೊರೆಕೆಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಈ ಕಾರ್ಯಚರಣೆ ಮೂಲಕ ಎಸ್.ಈ.ಎ ಕಾಲೇಜು ತನ್ನ ಸಾಮಾಜಿಕ ಜವಾಬ್ದಾರಿಯ ಅರಿವು ತೋರಿಸಿ, ಪರಿಸರ ಸ್ನೇಹಿ ತತ್ವದತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶವನ್ನು ಯಶಸ್ವಿಯಾಗಿ ಪೂರೈಸಿತು.
“ನಾವೆಲ್ಲರೂ ಒಂದೇ ಪೃಥ್ವಿಯ ಮಕ್ಕಳು – ಗಿಡ ನೆಡಿ, ಭೂಮಿ ಉಳಿಸಿ!” ಎಂಬ ಸಂದೇಶ ಈ ಕಾರ್ಯಕ್ರಮದ ಮೂಲಕ ಎಲ್ಲರ ಮನಸ್ಸಲ್ಲಿ ಬೆಸೆಯಿತು.
ವರದಿ :ಪ್ರಭಾಕರ್ ಚಿಕ್ಕಬಳ್ಳಾಪುರ