September 9, 2025
sathvikanudi - ch tech giant

ತಿಪಟೂರು ತಾಲ್ಲೂಕಿನಲ್ಲಿರುವ 38 ಗೊಲ್ಲರಹಟ್ಟಿಗಳನ್ನು. ಕಂದಾಯ ಗ್ರಾಮ ಮಾಡಲು ಮನವಿ.!?

Spread the love



ತಿಪಟೂರು. ತಾಲ್ಲೂಕಿನ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ತಿಪಟೂರು ತಾಲೂಕು ಶಾಖೆ ವತಿಯಿಂದ ತಾಲೂಕಿನಲ್ಲಿರುವ ಎಲ್ಲಾ ಗೊಲ್ಲರಟಿಗಳನ್ನು ಕಂದಾಯ ಗ್ರಾಮ ಮಾಡಲು ತಹಸೀಲ್ದಾರ್ ರವರಿಗೆ ಕಾಡು ಗೊಲ್ಲರ ಸಂಘದ ಮುಖಂಡರಿಂದ ಮನವಿ

ಕಾಡುಗೊಲ್ಲರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲರಾಜು ಮಾತನಾಡಿ ತಾಲೂಕಿನಲ್ಲಿ 38 ಗೊಲ್ಲರಹಟ್ಟಿಗಳಲ್ಲಿ ಕಾಡುಗೊಲ್ಲ ಜನಾಂಗವು ವಾಸ ಮಾಡುತ್ತಿದ್ದು ಇವರುಗಳು ಗ್ರಾಮಠಾಣ ಸರ್ಕಾರಿ ಸರ್ವೇ ನಂಬರ್  ಗೋಮಾಳಗಳಲ್ಲಿ ಹಾಗೂ ಇತರೆ ಜಾಗಗಳಲ್ಲಿ ವಾಸ ಮಾಡುತ್ತಿದ್ದು ಇವರಿಗೆ ನಿರ್ದಿಷ್ಟವಾದ ನಿವೇಶನಗಳು ಹಾಗೂ ದಾಖಲಾತಿಗಳು ಇರುವುದಿಲ್ಲ ಗ್ರಾಮ ಠಾಣ ವ್ಯಾಪ್ತಿಯಲ್ಲಿ ವಾಸವಾಗಿರುವ ಕೆಲವರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದ್ದು  ಇನ್ನೂ ಉಳಿದ ಮನೆಗಳಿಗೆ ಹಕ್ಕು ಪತ್ರ ವಿತರಣೆ ಆಗಿಲ್ಲ ಹಾಗಾಗಿ ಅಳತೆಗೆ ತಕ್ಕಂತೆ ಹಕ್ಕು ಪತ್ರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ. ಹಿರಿಯ ಮುಖಂಡ ಶಂಕರಪ್ಪ. ರವೀಂದ್ರ ಜಕ್ಕನಹಳ್ಳಿ. ಚಂದ್ರಪ್ಪ. ತಮ್ಮಯಣ್ಣ. ಉಜ್ಜಜ್ಜಿ ರಾಜಣ್ಣ. ಜಯಣ್ಣ. ಮಹೇಂದ್ರ. ಶಶಿಧರ್. ಯತೀಶ್ ಮಹೇಶ್ ಬಸವರಾಜ್ ರಘು ರಾಮಣ್ಣ ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು..


ವರದಿ :✍🏻 ಮಂಜು ಗುರುಗದಹಳ್ಳಿ✍🏻

WhatsApp Image 2025-06-21 at 19.57.59
Trending Now