
ಅಫಜಲಪುರ: ಭಾರತೀಯ ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಕ್ಷೇತ್ರವು ದೇಶದ ಪ್ರಜಾಪ್ರಭುತ್ವದ ಘಟ್ಟಗಳಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ, ಭ್ರಷ್ಟಾಚಾರದ ವಿರುದ್ಧ ಧೈರ್ಯದಿಂದ ಸುದ್ದಿ ಪ್ರಸಾರ ಮಾಡುವ ಪತ್ರಕರ್ತರಿಗೆ ಇಂದು ಯಾವುದೇ ಕಾನೂನು ರಕ್ಷಣೆ ದೊರೆಯದೆ, ಜೀವ ಬೆದರಿಕೆಗಳನ್ನು ಎದುರಿಸುವಂತಾಗಿದೆ.
ಚೌಡಾಪೂರ ಗ್ರಾಮ ಪಂಚಾಯತಿಯ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆದಿದೆ ಎಂಬ ಮಾಹಿತಿ ಆಧಾರಿತವಾಗಿ ವರದಿಗಾರ ಕಾಡಸಿದ್ಧ ಎಸ್. ಕಟ್ಟಿಮನಿ ಸುದ್ದಿಯನ್ನು ಪ್ರಸಾರ ಮಾಡಿದ ಹಿನ್ನೆಲೆ, ಕೆಲ ಭ್ರಷ್ಟ ಮಾಫಿಯಾ ಜನರಿಂದ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕೋದ್ಯಮವು ದೇಶದ ಚೌಕಟ್ಟನ್ನು ಸುದ್ಧಿಗೊಳಿಸುವ, ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವ ಒಂದು ಪ್ರಬಲ ಶಕ್ತಿಯಾಗಿದ್ದರೂ, ಪ್ರಾಮಾಣಿಕ ಪತ್ರಕರ್ತರಿಗೆ ಸರಕಾರದಿಂದ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸುದ್ದಿ ಪ್ರಕಟಿಸಿದ ಕಾರಣಕ್ಕೆ ದಿನವಿಡಿ ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತರು ಇಂತಹ ಬೆದರಿಕೆಗಳಿಗೆ ಹೆದರಿ ಹಿಂದೆ ಸರಿಯಬೇಕಾಗಿರುವ ಪರಿಸ್ಥಿತಿಯು ದುರಂತಕರವಾಗಿದೆ.
ಇದು ಕೇವಲ ಕಾಡಸಿದ್ಧ ಕಟ್ಟಿಮನಿ ಅವರ ಸಮಸ್ಯೆಯಲ್ಲ. ಇದು ನೂರು ಸಾವಿರ ಪತ್ರಕರ್ತರ ದೈನಂದಿನ ಕಹಿ ಅನುಭವ. ಇಂತಹ ಪರಿಸ್ಥಿತಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರ ಹೊರಿಗೆ ಸಮುದಾಯದಿಂದ ಹಾಗೂ ಸರ್ಕಾರದಿಂದ ನಿಗದಿತ ರಕ್ಷಣೆ ಸಿಗಬೇಕಾಗಿದೆ.
ಇದರಿಂದ ಸರಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಪ್ರಾಮಾಣಿಕವಾಗಿ ಪತ್ರಿಕಾ ಧರ್ಮಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಕಾನೂನು ರಕ್ಷಣೆ, ಭದ್ರತೆ ಹಾಗೂ ಸಮ್ಮಾನ ಸಿಗುವಂತೆ ಕ್ರಮ ಜರುಗಿಸಬೇಕು ಎಂಬುದು ಪತ್ರಕರ್ತರ ಆಗ್ರಹವಾಗಿದೆ.✍🏻