September 9, 2025
sathvikanudi - ch tech giant

ಬೆಂಗಳೂರು: ವಿಸಾ ವಂಚನೆ ಮಾಡುತ್ತಿದ್ದ ದಂಪತಿ ಬಂಧನ…!?

Spread the love


ಬೆಂಗಳೂರು ಸೌತ್ ಈಸ್ಟ್ ಸೈಬರ್ ಕ್ರೈಂ ಪೊಲೀಸರು ವಿಸಾ ವಂಚನೆ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತರು ಬೆಂಗಳೂರಿನ ಸಕ್ಲೀನ್ ಸುಲ್ತಾನ್ ಮತ್ತು ನಿಖಾತ್ ಸುಲ್ತಾನ.

ಆಸಾಮಿಗಳು ಪೇಸ್ಟುಕ್ ಮತ್ತು ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ವಿದೇಶ ವಿಸಾ ಸಹಾಯ ಸೇವೆಗಳ ಬಗ್ಗೆ ಜಾಹೀರಾತು ನೀಡುತ್ತಿದ್ದರು. ವಿದೇಶ ಪ್ರಯಾಣ ಕನಸು ಕಟ್ಟಿದ ಜನರನ್ನು ಟಾರ್ಗೆಟ್ ಮಾಡಿಕೊಂಡು, ಸುಲಭವಾಗಿ ವಿಸಾ ದೊರೆಯಿಸುತ್ತೇವೆ ಎಂಬ ನಂಬಿಕೆ ಮೂಡಿಸಿ ಹಣ ವಸೂಲಿ ಮಾಡುತ್ತಿದ್ದರು.

ವಿಶೇಷವಾಗಿ ವಿದೇಶಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಕುದುರೆ ಓಡಿಸುವ ವ್ಯಕ್ತಿಗಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳ ಸಂಚು ಬಹಳ ಚತುರವಾಗಿತ್ತು. ತನಿಖೆಯಲ್ಲಿ, ಇವರಿಬ್ಬರು ಸುಮಾರು 51 ಮಂದಿಗೆ ₹2 ಕೋಟಿಕ್ಕೂ ಹೆಚ್ಚು ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.

ಬಂಧಿತರಿಂದ ಎರಡು ಬೈಕ್‌ಗಳು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಪೊಲೀಸರು ಪ್ರಕರಣವನ್ನು ಮತ್ತಷ್ಟು ಆಳವಾಗಿ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಈ ರೀತಿಯ ಮೋಸದಿಂದ ಎಚ್ಚರ ವಹಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

WhatsApp Image 2025-06-21 at 19.57.59
Trending Now