September 9, 2025
sathvikanudi - ch tech giant

ಕುಂಸಿ ಪೊಲೀಸ್ ಠಾಣಾ ವತಿಯಿಂದ ಮಾದಕವಾಸ್ತು ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನ……

Spread the love

ಶಿವಮೊಗ್ಗ :

ತಾಲೂಕಿನ ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಆಯನೂರು ಪದವಿ ಪೂರ್ವ ಕಾಲೇಜು ಮತ್ತು ಕುಂಸಿಯ ಪಿ.ಯು. ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರುಪಯೋಗ ಮತ್ತು ಆಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನದ ಪ್ರಯುಕ್ತ ಕಾರ್ಯಕ್ರಮವನ್ನು ಕುಂಸಿ ಪೊಲೀಸ್ ಠಾಣೆಯ ವತಿಯಿಂದ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಾದ  ಇನ್ಸ್‌ಪೆಕ್ಟರ್ ಹರೀಶ್ ಪಾಟೀಲ್, ಪಿ.ಎಸ್.ಐ. ಶಾಂತರಾಜು, ಪಿ.ಎಸ್.ಐ. ಶ್ರೀಮತಿ ಪಾರ್ವತಿಭಾಯಿ, ಪಿ.ಎಸ್.ಐ. ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



ಕಾರ್ಯಕ್ರಮದ ವೇಳೆ, ಮುಖ್ಯ ಅತಿಥಿಗಳು ಮಾದಕ ವಸ್ತುಗಳ ದುರುಪಯೋಗದ ಪರಿಣಾಮಗಳು ಮತ್ತು ಅದರ ಪ್ರಚಲಿತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು . ಮಾದಕ ವಸ್ತುಗಳ ಬಳಕೆಯು ಹೇಗೆ ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಸಮಾಜಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿದರು. ಇದರ ಜೊತೆಗೆ, ಆಕ್ರಮ ಸಾಗಣೆಯ ನಿಯಂತ್ರಣಕ್ಕಾಗಿ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳನ್ನು ಪರಿಚಯಿಸಿದರು.



ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರುವ ಮಹತ್ವವನ್ನು ಮನದಟ್ಟಾಗಿಸಲು ಮತ್ತು ಯಾವುದೇ ಮಾದಕ ವಸ್ತುಗಳ ಸಾಗಣೆ ಮಾಡುವ ವ್ಯಕ್ತಿಗಳು ನಿಮ್ಮ ಗಮನಕ್ಕೆ ಬಂದ ಸಂದರ್ಭವನ್ನು ತಕ್ಷಣವೇ ಪೊಲೀಸರಿಗೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ತಿಳಿಸುವಂತೆ ಉತ್ತೇಜಿಸಲಾಯಿತು.

ಸದೃಢ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಹಾಗೂ ಪ್ರತಿ ವಿದ್ಯಾರ್ಥಿಯು ಬುದ್ಧಿ ಮತ್ತು ಶಾರೀರಿಕ ಸುಸ್ಥಿತಿಗಾಗಿ ತಾವೂ ಕೂಡ ಜವಾಬ್ದಾರರಾಗಿ ನಡೆದುಕೊಳ್ಳಬೇಕು ಎಂಬ ಸಂದೇಶವನ್ನು ನೀಡುವುದರ  ಮೂಲಕ ಮನದಟ್ಟು ಮಾಡಲಾಯಿತು.


ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಲ್ಲುವುದರ ಮೂಲಕ ಕಾರ್ಯಕ್ರಮ ವನ್ನು ಅಂತ್ಯ ಗೊಳಿಸಲಾಯಿತು…

WhatsApp Image 2025-06-21 at 19.57.59
Trending Now