October 24, 2025
sathvikanudi - ch tech giant

ಭದ್ರಾವತಿಯಲ್ಲಿ ನಾಟ ಸಾಗಣೆ: ರಾಜಕಾರಣದ ಮಧ್ಯೆ ಅರಣ್ಯ ಇಲಾಖೆಯ ಬಿಕ್ಕಟ್ಟು…!?

Spread the love

ಶಿವಮೊಗ್ಗ :

ಭದ್ರಾವತಿ ತಾಲ್ಲೂಕು ಎಮ್ಮೆದೊಡ್ಡಿ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ನಾಟ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭ, ಅರಣ್ಯಾಧಿಕಾರಿಗಳು ಮತ್ತು ಮರಗಳ್ಳರ ನಡುವೆ ಮಾತಿನ ಚಕಮಕಿ ಉಂಟಾಗಿ, ಸ್ಥಳೀಯ ಪ್ರಭಾವಿಗಳಿಂದ ಟ್ರ್ಯಾಕ್ಟರ್ ಬಿಡುಗಡೆ ಮಾಡಲು ರಾಜಕೀಯ ಒತ್ತಡ ಎದುರಾಗಿದೆ.



ಅರಣ್ಯ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳು ಕಾನೂನು ಪಾಲನೆಗಾಗಿ ಕ್ರಮ ಕೈಗೊಳ್ಳಲು ಮುಂದಾದಾಗ, ಅವರಿಗೆ ಬೆದರಿಕೆ ಕರೆಗಳು ಮತ್ತು ವರ್ಗಾವಣೆ ಭಯ ಹೇರುವಂತಹ ರಾಜಕೀಯ ಕ್ರೀಡೆಗಳು ನಡೆಯುತ್ತಿವೆ. ಕಾನೂನು ಅನುಸರಿಸುವ ಬದಲು, ಕೆಲವು ರಾಜಕಾರಣಿಗಳು ಮರಗಳ ಕಳ್ಳತನಕ್ಕೆ ನೇರ ಅಥವಾ ಪರೋಕ್ಷ ಸಹಕಾರ ನೀಡುತ್ತಿರುವುದು ಆರೋಪವಾಗಿದೆ.

ಈ ಪ್ರಕರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಭಾವಿಗಳ ರಾಜಕೀಯ ಪ್ರಭಾವದಿಂದ ಕಾನೂನು ಅನ್ವಯಿಸುವ ಪ್ರಕ್ರಿಯೆಯೇ ವಿಘಟಿತವಾಗುತ್ತಿರುವುದು ಕಾನೂನು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸುತ್ತದೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಮೇಲಾಧಿಕಾರಿಗಳು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಾನೂನು ಸುಗಮವಾಗಿ ಜಾರಿಯಾಗದಿದ್ದರೆ, ನಿಷ್ಠಾವಂತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ಅಸಮರ್ಥರಾಗುವ ಅಪಾಯವಿದೆ. ಆದ್ದರಿಂದ, ಈ ಪ್ರಕರಣದ ಬಗ್ಗೆ ತಕ್ಷಣ ಕ್ರಮ ಕೈಗೊoಡು ಸಾರ್ವಜನಿಕರು ಕಾನೂನು ವ್ಯವಸ್ಥೆ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ,..

WhatsApp Image 2025-06-21 at 19.57.59
Trending Now