September 9, 2025
sathvikanudi - ch tech giant

Crime News: ಅತಿಯಾಗಿ ಸೆಕ್ಸ್​​ಗೆ ಒತ್ತಾಯಿಸಿದಕ್ಕೆ ಇನ್​​ಸ್ಟಾ ಗೆಳತಿ ಕಥೆಯನ್ನೇ ಮುಗಿಸಿದ್ದ ಆರೋಪಿ ಅರೆಸ್ಟ್​

Spread the love

ಆರೋಪಿ ನವೀನ್​​ ಸಾಮಾಜಿಕ ಜಾಲತಾಣ ಇನ್​​ಸ್ಟಾದಲ್ಲಿ ಮೃತ ಮಹಿಳೆ ಶೋಭಾರನ್ನು ಪರಿಚಯ ಮಾಡಿಕೊಂಡಿದ್ದನಂತೆ. ಇಬ್ಬರ ನಡುವಿನ ಸ್ನೇಹ ಕೆಲ ದಿನಗಳ ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಕೊಡಿಗೇಹಳ್ಳಿ ಒಂಟಿ ಮಹಿಳೆ (Single Women) ಹತ್ಯೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ಮನೆಯಲ್ಲೇ ಮಹಿಳೆಯನ್ನು ಕೊಲೆ ಮಾಡಿ (Murder Case) ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು (Kodigenahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೇರೋಹಳ್ಳಿ ಮೂಲದ ನವೀನ್ ಬಂಧಿತ ಆರೋಪಿಯಾಗಿದ್ದು, ಏಪ್ರಿಲ್ 19ನೇ ತಾರೀಖು 48 ವರ್ಷದ ಶೋಭಾ ಎಂಬ ಮಹಿಳೆಯ ಮೃತದೇಹ ನಗ್ನಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆರೋಪಿ ನವೀನ್​​ ಸಾಮಾಜಿಕ ಜಾಲತಾಣ ಇನ್​​ಸ್ಟಾದಲ್ಲಿ ಮೃತ ಮಹಿಳೆ ಶೋಭಾರನ್ನು ಪರಿಚಯ ಮಾಡಿಕೊಂಡಿದ್ದನಂತೆ. ಇಬ್ಬರ ನಡುವಿನ ಸ್ನೇಹ ಕೆಲ ದಿನಗಳ ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಕೊಲೆ ನಡೆದ ದಿನವೂ ಮಹಿಳೆ ಮನೆಗೆ ನವೀನ್​ ಬಂದಿದ್ದನಂತೆ. ಈ ವೇಳೆ ಅತಿಯಾಗಿ ಸೆಕ್ಸ್ ಗೆ ಒತ್ತಾಯಿಸುತ್ತಿದ್ದರಿಂದ ಬೇಸರಗೊಂಡು ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಘಟನೆ ನಡೆದ ದಿನ ಕತ್ತು ಹಿಸುಕಿ 48 ವರ್ಷದ ಶೋಭಾರನ್ನು ಆರೋಪಿ ಕೊಲೆ ಮಾಡಿದ್ದನಂತೆ. ಮೃತ ಮಹಿಳೆ ಕೊಡಿಗೇಹಳ್ಳಿಯ ಗಣೇಶ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಮೃತ ಶೋಭಾಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಎರಡನೇ ಮಗಳಿಗೆ ಇದೇ ತಿಂಗಳ ನಾಲ್ಕರಂದು ಜೆಪಿ ನಗರಕ್ಕೆ ಮದುವೆ ಮಾಡಿ ಕೊಡಲಾಗಿತ್ತಂತೆ.

ಕಳೆದ ಗುರುವಾರ ಮೃತಳ ಪುತ್ರಿ ಗಂಡನ ಮನೆಗೆ ಹೋಗಿದ್ದು, ಶುಕ್ರವಾರ ಬೆಳಗ್ಗೆ ತಾಯಿಗೆ ಕರೆ ಮಾಡಿದ್ದಾಳೆ. ಆದರೆ ತಾಯಿ ಶೋಭಾ ಫೋನ್​ ಸ್ವಿಚ್ ಆಫ್ ಬಂದಿದೆ. ನಂತರ ತನ್ನ ಅಕ್ಕನಿಗೆ ಕರೆ ಮಾಡಿ ತಿಳಿಸಿದ್ದು, ಸಂಜೆ ಹಿರಿಯ ಮಗಳು ಮನೆಗೆ ಬಂದು ನೋಡಿದಾಗ ಶೋಭಾ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಬೆಡ್ ರೂಂನಲ್ಲಿ ನಗ್ನಾವಸ್ಥೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಅಲ್ಲದೇ ಶೋಭ ತಾಳಿ, ಚಿನ್ನದ ಸರ, ಮೊಬೈಲ್ ಫೋನ್ ಹಾಗೂ ಕಾರು ಕೂಡ ಕಣ್ಮರೆಯಾಗಿದ್ದವು

WhatsApp Image 2025-06-21 at 19.57.59
Trending Now