September 9, 2025
sathvikanudi - ch tech giant

ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ..!?

Spread the love



ಕಲಬುರ್ಗಿ:

ಜಿಲ್ಲೆಯ ಕವಲಗಾ ಗ್ರಾಮ ಪಂಚಾಯಿತಿಯ ಪಿಡಿಒ ಪ್ರೀತಿ ರಾಜ್ ಅವರು 17 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಂಪ್ ಆಪರೇಟರ್ ಗುರುಸಿದ್ದಯ್ಯ ಎಂಬುವವರಿಂದ ಈ ಮೊತ್ತವನ್ನು ಫೋನ್ ಪೇ ಮೂಲಕ ವರ್ಗಾಯಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.

ಪಿಡಿಒ ಪ್ರೀತಿ ರಾಜ್ ಲಂಚಕ್ಕಾಗಿ ಹಣ ವರ್ಗಾಯಿಸಲು ತಮ್ಮ ಖಾಸಗಿ ನಂಬರನ್ನು ನೀಡಿದ್ದರೆಂದು ವರದಿಯಾಗಿದೆ. ಗುರುಸಿದ್ದಯ್ಯ ಅವರಿಂದ ಹಣ ಪಡೆಯುತ್ತಿದ್ದಾಗಲೇ ಪೊಲೀಸರು ಅವರ ವಿರುದ್ಧ ಕಾರ್ಯಚರಣೆ ನಡೆಸಿದರು. ಸ್ಥಳೀಯರು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವನ್ನು ತಡೆಹಿಡಿಯುವಂತೆ ಆಗ್ರಹಿಸಿದ್ದಾರೆ.

ಈ ಘಟನೆ ರೈತರ ಹಾಗೂ ಗ್ರಾಮಸ್ಥರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಸ್ಥಳೀಯ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ಗಂಡಾಂತರವಾಗಿದೆ. ಆರೋಪಿತ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ, ಮತ್ತು ಈ ಪ್ರಕರಣದ ಸಂಪೂರ್ಣ ತನಿಖೆ ಮುಂದುವರಿಯುತ್ತಿದೆ.

WhatsApp Image 2025-06-21 at 19.57.59
Trending Now