September 9, 2025
sathvikanudi - ch tech giant

ಮಗನ ಮುಂದೆ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿರಾಯ…!?

Spread the love

ಮೈಸೂರು:

ಜಿಲ್ಲೆಯ ಹೆಚ್.ಡಿ ಕೋಟೆಯ ಹನುಮಂತ ನಗರದಲ್ಲಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ. ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡ ಪತಿ, ತನ್ನ ಮಗನ ಮುಂದೆ ಪತ್ನಿಯ ಮೇಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಗಾಯಗೊಂಡ ಮಹಿಳೆ ಮಧುರ ಎಂಬವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವಳ ಸಾವು ಬದುಕಿನ ನಡುವಿನ ಹೋರಾಟ ಮುಂದುವರಿದಿದೆ.

ಪತಿ ಮಲ್ಲೇಶ್ ನಾಯ್ಕ್, ಮೂಲತಃ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬಿಬಿ ತಾಂಡದವನು. ಸುಮಾರು 8 ವರ್ಷಗಳ ಹಿಂದಷ್ಟೇ ಮಧುರನ್ನ ವಿವಾಹವಾಗಿಸಿದ್ದಾನೆ, ಮೈಸೂರಿನ ಹೆಚ್.ಡಿ ಕೋಟೆ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಅವನ ಪತ್ನಿಗೆ ಕಳೆದ ಐದು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ. ಅಲ್ಲದೆ, ಪ್ರತಿದಿನವೂ ಮದ್ಯಪಾನಮಾಡಿ ಮನೆಗೆ ಬಂದು ಗಲಾಟೆ ಮಾಡುವ ಮೂಲಕ ಪತ್ನಿಯನ್ನು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ.

ಇತ್ತೀಚೆಗೆ, ಪತ್ನಿ ತಮ್ಮ ತವರು ಮನೆಗೆ ಹೋಗಿದ್ದರಿಂದ ಮಲ್ಲೇಶ್ ಆತನ ಕೋಪವನ್ನು ನಿಯಂತ್ರಿಸಿಕೊಳ್ಳಲಾರದು. ಈ ವಿಷಯದಿಂದ ಕೋಪಗೊಂಡ ಅವನು ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದುದಾಗಿ ತಿಳಿದುಬಂದಿದೆ. ಮಹಿಳೆಯ ಆರೋಗ್ಯ ಗಂಭೀರವಾಗಿದೆ ಮತ್ತು ಸದ್ಯ ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೇಲ್ಮುಖವಿದ್ದ ಪ್ರಕಾರಣಕ್ಕೆ ಸಂಬಂಧಿಸಿದಂತೆ, ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಳಸಗಿದೆ.

WhatsApp Image 2025-06-21 at 19.57.59
Trending Now