September 10, 2025
sathvikanudi - ch tech giant

ಬರಪರಿಹಾರದಲ್ಲಿ ಕುಂದುಕೊರತೆ ಇದ್ದರೆ ಸಹಾಯವಾಣಿ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ.

Spread the love

ರೈತರ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರಿನ ಸರಬರಾಜು ಮತ್ತು ಮೇವು ಲಭ್ಯತೆ ಸೇರಿದಂತೆ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಸಾರ್ವಜನಿಕರ ಕುಂದು ಕೊರತೆಯನ್ನು ಅವಲೋಕಿಸುವ ನಿಟ್ಟಿನಿಂದ ಜಿಲ್ಲಾ ಮಟ್ಟ ಮತ್ತು ಎಲ್ಲಾ ತಾಲೂಕು ಕಚೇರಿಗಳಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರಗಳು ಕಚೇರಿ ಸಮಯದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 1,98,387 ರೈತರಿಗೆ ₹35.66 ಕೋಟಿ ಬೆಳೆ ನಷ್ಟ ಪರಿಹಾರ ಒದಗಿಸಲು ಜಿಲ್ಲಾ ಆಡಳಿತದಿಂದ ಈಗಾಗಲೇ ಅನುಮೋದನೆ ನೀಡಲಾಗಿದೆ. ಇದುವರೆಗೆ 1,26,556 ರೈತರ ಖಾತೆಗಳಿಗೆ ₹22.74 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದ್ದಾರೆ.

ಯಾವ ತಾಲ್ಲೂಕಿನಲ್ಲಿ ಎಷ್ಟು  ರೈತರಿಗೆ ಪರಿಹಾರ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 14,168 ರೈತರು, ಗುಬ್ಬಿಯ 8,384, ಕೊರಟಗೆರೆ-11,957, ಕುಣಿಗಲ್-19,396, ಮಧುಗಿರಿ-14,582, ಪಾವಗಡ-4,922, ಶಿರಾ-14,977, ತಿಪಟೂರು-14,464, ತುಮಕೂರು-11,402 ಹಾಗೂ ತುರುವೇಕೆರೆ ತಾಲ್ಲೂಕಿನ 12,304 ರೈತರ ಖಾತೆಗಳಿಗೆ ಈಗಾಗಲೇ ಹಣ ಜಮಾ ಆಗಿದೆ ಎಂದು ಹೇಳಿದ್ದಾರೆ.

ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್‌ ಜೋಡಣೆ, ಇತರೆ ತಾಂತ್ರಿಕ ದೋಷಗಳಿಂದ 3,389 ರೈತರಿಗೆ ಬೆಳೆ ನಷ್ಟ ಪರಿಹಾರ ಪಾವತಿಯಾಗಿಲ್ಲ. ಜಿಲ್ಲೆಯ ರೈತರು ತಮ್ಮ ಆಧಾರ್‌ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಕೃಷಿ ಇಲಾಖೆಯ ಕಚೇರಿ, ರೈತರ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

ಬರ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಸಹಾಯವಾಣಿ

ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ನೇರವಾಗಿ ತಾಲೂಕು

ಕೇಂದ್ರಗಳಿಗೂ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದೆ.

ಸಂಬಂಧಿಸಿದವರು ತುಮಕೂರು ಜಿಲ್ಲೆ: 8162278718,

ಚಿಕ್ಕನಾಯಕನಹಳ್ಳಿ ತಾಲೂಕು: 08133-267242,



ಗುಬ್ಬಿ    :   08131-222234,

ಕೊರಟಗೆರೆ : 08138-232153,

ಕುಣಿಗಲ್ :08132.220239.

ಮಧುಗಿರಿ :08137.200500.

ಪಾವಗಡ :08136.244242.

ಶಿರಾ :08135.200842.

ತಿಪಟೂರು :08134.251039.

ತುಮಕೂರು :0816.2278496.

ತುರುವೇಕೆರೆ :08139.287325

ತುಮಕೂರು ಉಪವಿಭಾಗಾಧಿಕಾರಿ ಕಚೇರಿ 0816-2278493

ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ(08134-251085) ಹಾಗೂ

ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿ(08137-

200822)ಯಲ್ಲಿಯೂ ಸಹಾಯವಾಣಿ ಕೇಂದ್ರಗಳನ್ನು

ತೆರೆಯಲಾಗಿದೆ.

WhatsApp Image 2025-06-21 at 19.57.59
Trending Now