September 10, 2025
sathvikanudi - ch tech giant

ಸ್ಮಾರ್ಟ್ ಸಿಟಿ’ ಶಿವಮೊಗ್ಗದಲ್ಲಿ ಕುಸಿತಗೊಂಡ ನೈರ್ಮಲ್ಯ – ತಹಶೀಲ್ದಾರ್ ಕಚೇರಿ ಆವರಣವೇ ಕೊಳಚೆ ಗೂಡು!

Spread the love




ಶಿವಮೊಗ್ಗ: ‘ಸ್ಮಾರ್ಟ್ ಸಿಟಿ’ ಎಂಬ ಬಡ್ಜೆ ಹಾಕಿಕೊಂಡಿರುವ ಶಿವಮೊಗ್ಗ ನಗರದಲ್ಲಿ ನೈರ್ಮಲ್ಯದ ಸ್ಥಿತಿ ತೀವ್ರ ಪತನದ ಹಾದಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ತಾಲ್ಲೂಕು ದಂಡಾಧಿಕಾರಿಗಳ (ತಹಶೀಲ್ದಾರ್) ಕಚೇರಿಯ ಮುಖ್ಯ ದ್ವಾರದ ಪರಿಸರವೇ ನಿದರ್ಶನವಾಗಿದೆ. ಕಚೇರಿ ಪ್ರವೇಶದ ಬಾಗಿಲಿನ ಬಳಿ ಕಸದ ರಾಶಿಗಳು, ನಿಂತ ಕೊಳಚೆ ನೀರು, ದುರ್ವಾಸನೆ ಹಾಗೂ ದುಷ್ಪ್ರಭಾವಿತ ಪರಿಸರ ಇದನ್ನು ದೃಢಪಡಿಸುತ್ತಿವೆ.



ನಿತ್ಯ ನೂರಾರು ನಾಗರಿಕರು ತಮ್ಮ ಕಾನೂನು, ಆಸ್ತಿ, ಸಾರ್ವಜನಿಕ ಸೇವೆಗಳ ನಿಟ್ಟಿನಲ್ಲಿ ಕಚೇರಿ ಭೇಟಿ ನೀಡುವ ಪರಿಸ್ಥಿತಿಯಲ್ಲಿ, ಮುಖ್ಯ ದ್ವಾರದಿಂದಲೇ ಸ್ಮಾರ್ಟ್ ಸಿಟಿಯ ‘ಸ್ಮಾರ್ಟ್’ತೆ ಗೂಡಲಿ ವಾಸನೆ ಹೊಡೆಯುತ್ತಿದೆ. ಕಚೇರಿ ಆವರಣದಲ್ಲಿ ಸಂಚರಿಸೋ ಮುನ್ನವೇ,  ನಿಂತ ನೀರಿನಿಂದ ಹರಡುತ್ತಿರುವ ದುರ್ವಾಸನೆ ಜನಸಾಮಾನ್ಯರಲ್ಲಿ ಅಸಹನೆ ಉಂಟುಮಾಡುತ್ತಿದೆ.



ಕಚೇರಿಯ ಆವರಣದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಕೊಳಚೆ ಪರಿಸ್ಥಿತಿ ಸುತ್ತಮುತ್ತಲಿನ ಸಾರ್ವಜನಿಕ ಆರೋಗ್ಯಕ್ಕೂ ತೀವ್ರ ಅಪಾಯವನ್ನುಂಟುಮಾಡುವಂತಿದೆ. ಮಳೆಗಾಲದಲ್ಲಿ ಇದು ಮಶಕ, ಸೋಂಕು ಜ್ವರಗಳ ಕೇಂದ್ರಬಿಂದು ಆಗುವುದಕ್ಕೆ ಯಾವುದೇ ಅನುಮಾನವಿಲ್ಲ. ಇದರ ಬಗ್ಗೆ ಆಡಳಿತ ತಲೆಕೆಡಿಸಿಕೊಳ್ಳದಿರುವುದು ಇನ್ನೂ ಆಶ್ಚರ್ಯಕರ ಸಂಗತಿಯಾಗಿದೆ

.

ಸರ್ಕಾರಿ ಕಚೇರಿಯ ಪರಿಸರವೇ ಇಂತಹಾಗಿದ್ದರೆ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಸಿದ್ದತೆಗಳ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗುತ್ತದೆ. ಪ್ರತಿದಿನ ಸರ್ಕಾರಿ ನೌಕರರು, ರೈತರು ಅಧಿಕಾರಿಗಳು ಈ ಪ್ರದೇಶದೊಳಗೇ ಸಂಚರಿಸುತ್ತಿದ್ದರೂ, ಈ ದುಸ್ಥಿತಿ ಕಡೆಗಣನೆಯಲ್ಲಿರುವುದು ಸದ್ಯದ ಆಡಳಿತದ ನಿರ್ಲಕ್ಷ್ಯವನ್ನು ಬಿಂಬಿಸುತ್ತದೆ.



ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟಿ ಕೋಟಿ ರೂ. ವೆಚ್ಚ ಮಾಡುತ್ತಿರುವ ನಗರಾಭಿವೃದ್ಧಿ ಇಲಾಖೆ, ಶುದ್ದತೆ ಎಂಬ ಮೂಲಭೂತ ಸೇವೆಯನ್ನೂ ಕಾಪಾಡಿಕೊಳ್ಳದಿದ್ದರೆ, ಅದು ಶೂನ್ಯ ಪ್ರಯೋಜನವಾಗಿದೆ. ತಹಶೀಲ್ದಾರ್ ಕಚೇರಿ ಮೊದಲೇ ಸ್ವಚ್ಛತೆಯ ನಿದರ್ಶನವಾಗಬೇಕಾಗಿದ್ದು, ಅಧಿಕಾರಿಗಳು ಕೂಡಲೇ ಗಮನಹರಿಸಿ ನೈರ್ಮಲ್ಯ ಕಾಪಾಡುವ ತುರ್ತು ಕ್ರಮ ಕೈಗೊಳ್ಳಬೇಕು.✍🏻✍🏻✍🏻

WhatsApp Image 2025-06-21 at 19.57.59
Trending Now