September 10, 2025
sathvikanudi - ch tech giant

ಸರ್ಕಾರಿ ಶಾಲೆಯ ನೆರವಿಗೆ ನಿಂತ, ಮಾಯಸಂದ್ರ ಜಾಮಿಯಾ ಮಸೀದಿ ಕಮಿಟಿ.!?

Spread the love



ಸರ್ಕಾರಿ ಶಾಲೆ ಉಳಿಸಿ: ಸಿರಾಜ್ ಬೇಗ್.

ತುರುವೇಕೆರೆ: ಸರ್ಕಾರಿ ಶಾಲೆ ಉಳಿಸುವಂತೆ, ಮಾಯಸಂದ್ರ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷರಾದ ಸಿರಾಜ್ ಬೇಗ್ ಮನವಿ ಮಾಡಿದರು.

ಭಾನುವಾರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿ, ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಖಾಸಗಿ ಕಾನ್ವೆಂಟ್ ಗಳ ವ್ಯಾಮೋಹದಿಂದ ಮಕ್ಕಳನ್ನು ಸರ್ಕಾರಿ ಶಾಲೆಯನ್ನು ಬಿಡಿಸಿ, ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಸರ್ಕಾರಿ  ಶಾಲೆಗಳ ದಾಖಲಾತಿ ಕುಂಠಿತವಾಗುತ್ತಿರುವ ಹಿನ್ನೆಲೆ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ.

ಸರ್ಕಾರಿ ಶಾಲೆಯಲ್ಲಿ‌ ದೊರೆಯುವ ಶಿಕ್ಷಣ ಯಾವುದೇ ಖಾಸಗಿ ಶಾಲೆಯಲ್ಲಿ ದೊರೆಯುವುದಿಲ್ಲ, ಪರಿಣಿತ ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅದೆಷ್ಟೋ ಮಂದಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದು ಸರ್ಕಾರಿ ಉರ್ದು ಶಾಲೆಯಲ್ಲಿನ 31 ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ 2000 ರೂಗಳಂತೆ 62,000 ರೂಗಳನ್ನು ಮಸೀದಿ ಕಮಿಟಿ ವತಿಯಿಂದ ನೀಡಿದ್ದೇವೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕವಾಗಿ ಅನುಕೂಲವಾಗುವಂತೆ ಸದ್ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಯಲ್ಲಿ ಓದುವಂತೆ ಮತ್ತು ಸರ್ಕಾರಿಕನ್ನಡ ಶಾಲೆಯಲ್ಲಿ ದಾಖಲಾಗುವಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನವಿ ಮಾಡಿದರು.

ಕಮಿಟಿಯ ಖಜಾಂಚಿ ಮತ್ತು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ರೆಹಮತ್ ಉಲ್ಲಾ ರವರು ಮಾತನಾಡಿ 1929ರ ಸಾಲಿನಲ್ಲಿ  ಮಾಯಸಂದ್ರದಲ್ಲಿ ಸ್ಥಾಪಿತವಾದ ಸರ್ಕಾರಿ ಉರ್ದು ಶಾಲೆಯು  ಇಂದಿಗೂ ಸಹ ಉತ್ತಮವಾಗಿ ಸಾಗುತ್ತಿದೆ. ಶತಮಾನ ಕಂಡ ಸರ್ಕಾರಿ ಕನ್ನಡ ಪ್ರಾಥಮಿಕ ಸಶಾಲೆಯೂ ಕೂಡ ಇಂದಿಗೂ ಗ್ರಾಮದಲ್ಲಿದ್ದು, ಉತ್ತಮ ಶಿಕ್ಷಕರು ಉತ್ತಮ ಶಿಕ್ಷಣವನ್ನು ನೀಡುತ್ತಿದೆ. ಇಂದು ಜಾಮಿಯಾ ಮಸೀದಿ ಕಮಿಟಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಮುಂದೆಯೂ ಸಹ ನಮ್ಮ ಸರ್ಕಾರಿ ಕನ್ನಡ ಶಾಲೆಗೆ, ಸರ್ಕಾರಿ ಉರ್ದು ಶಾಲೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳುತ್ತೇವೆ. ಕಮಿಟಿಯ ವತಿಯಿಂದ ಅಂಗನವಾಡಿ ರಿಪೇರಿ, ಶಾಲಾ ಅಭಿವೃದ್ಧಿಗಾಗಿ, ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿ ಎಂದು ಮಸೀದಿಯ ಕಮಿಟಿ ವತಿಯಿಂದ ಸರ್ಕಾರಿ ಉರ್ದು ಶಾಲೆಯನ್ನು ದತ್ತು  ಪಡೆಯುತ್ತಿದ್ದೇವೆ ಪ್ರತಿ ವರ್ಷವೂ ಈ ಕಾರ್ಯ ನಿರಂತರವಾಗಿ ಸಾಗಲಿದೆ  ಎಂದು ತಿಳಿಸಿದ ಅವರು  ಪೋಷಕರೇ ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆ ಉಳಿಸಿ, ಕನ್ನಡ ಬೆಳೆಸಿ, ಉಳಿಸಿ ಎಂದು ಮನವಿ ಮಾಡುತ್ತ ಮಕ್ಕಳಿಗೆ ಫೋನ್ ಗಳನ್ನು ನೀಡಬಾರದು ಎಂದು ಕಿವುಮಾತು ಹೇಳಿದರು.


ಮುಸ್ಲಿಂ ಸಮುದಾಯದ ಎಂ.ಎಸ್.ಸಿ, ಪದವಿ ಪಡೆದ ಹಿರಿಯ ವಿದ್ಯಾರ್ಥಿ ಜೋಹೆರಾ ಫಾತಿಮಾ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆಯನ್ನು ಮಾಡಬೇಕು, ಶಿಕ್ಷಣ ವಂಚಿತರಾಗಬಾರದು. ಅಬ್ದುಲ್ ಕಲಾಂ. ಸರ್.ಎಂ.ವಿಶ್ವೇಶ್ವರಯ್ಯ ರವರಂತಹ  ಸಾಧನೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳೊಂದಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು ಮತ್ತು ವೈಯಕ್ತಿತವಾಗಿ ತಮ್ಮ ಕುಟುಂಬದ ಪರವಾಗಿ 4 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದರು.

ಈ ಸಂದರ್ಭದಲ್ಲಿ ಕಮಿಟಿಯ ಕಾರ್ಯದರ್ಶಿ ಅಸ್ಲಾಂ ಪಾಷಾ. ದಾಸಿಹಳ್ಳಿ ಮುತಾವಲಿ ಶೌಕತ್ ಅಲಿ.ಆಜಾಂ. ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಕರಿಬಸಪ್ಪ. ಅಂಗನವಾಡಿ ಶಿಕ್ಷಕಿ ನೇತ್ರಾವತಿ. ಕೊಡಗಿಹಳ್ಳಿ ಉರ್ದು ಶಾಲೆ ಮುಖ್ಯ ಶಿಕ್ಷಕ ಸಯ್ಯದ್ ಅಹಮದ್ ಖಾನ್. ಮಾಯಸಂದ್ರ ಜಾಮಿಯಾ ಮಸೀದಿ ಕಮಿಟಿಯ ಸರ್ವ ಸದಸ್ಯರುಗಳು ಪದಾಧಿಕಾರಿಗಳು. ಕಲೀಲ್. ದಿಲ್ಲು. ಉರ್ದು ಶಾಲೆಯ ಮುಖ್ಯ ಶಿಕ್ಷಕ ಸಯ್ಯದ್ ಇಮ್ರಾನ್. ಸ.ಶಿಕ್ಷಕ ಉಮೇಶ್. ಯಾಸಿನ್ ತಾಜ್. ಅಂಗನವಾಡಿ ಶಿಕ್ಷಕಿ ಶಬಿನ್ ತಾಜ್. ಸೇರಿದಂತೆ ಗ್ರಾಮಸ್ಥರು. ಮುಸ್ಲಿಂ ಸಮಾಜದ ಮುಖಂಡರುಗಳು. ಮುಂತಾದವರಿದ್ದರು.

WhatsApp Image 2025-06-21 at 19.57.59
Trending Now