ಶಿವಮೊಗ್ಗ :
ರಾಷ್ಟ್ರಧ್ವಜದ ಅಪಮಾನ: ತಾಲೂಕಿನ ಕೋನಗವಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಮೈಸವಳ್ಳಿ ಹತ್ತಿರ ಧ್ವಜದ ಕಂಬ ಮುರಿದು ಬಿದ್ದರೂ ಅಧಿಕಾರಿಗಳಿಂದ ಪ್ರತಿಕ್ರಿಯೆಯಿಲ್ಲ!

🇮🇳 ಕೇಸರಿ, ಬಿಳಿ, ಹಸಿರು ನಮ್ಮ ರಾಷ್ಟ್ರಧ್ವಜದ ಬಣ್ಣಗಳು ಮಾತ್ರವಲ್ಲ, ನಮ್ಮ ರಾಷ್ಟ್ರದ ಅಸ್ತಿತ್ವದ ಗುರುತುಗಳು! ಆದರೆ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಮೈಸವಳ್ಳಿ ಹತ್ತಿರ, ಈ ಬಣ್ಣಗಳನ್ನು ಹೊತ್ತಿರುವ ಧ್ವಜದ ಕಂಬ ಬಹುಕಾಲದಿಂದ ಮುರಿದು ಬಾಗಿದ ಸ್ಥಿತಿಯಲ್ಲಿ ನಿಲ್ಲಿದ್ದು, ರಾಷ್ಟ್ರಗೌರವಕ್ಕೆ ನಾಚಿಕೆ ತಂದಿರುವ ಘಟನೆ ನಡೆದಿದೆ.

ಸಂಕಟಕಾರಿಯೆಂದರೆ, ಈ ವಿಷಯವನ್ನು ಅಧಿಕಾರಿಗಳು ತಿಳಿದಿದ್ದರೂ ಕೂಡ ಯಾವುದೇ ಕಣ್ಣು ತೆರೆಯಿಲ್ಲ. ಜನರ ಕಷ್ಟದ (ತೆರಿಗೆ) ಹಣದಿಂದ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು, ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಧ್ವಜದಂತಹ ರಾಷ್ಟ್ರೀಯ ಗೌರವದ ವಿಚಾರದಲ್ಲಿಯೂ ನಿರ್ಲಕ್ಷ್ಯ ತೋರಿಸಿರುವುದು ಗಂಭೀರ ಅಪರಾಧಕ್ಕೆ ಸಮಾನ.
ಸ್ಥಳೀಯರು ಪದೇಪದೇ ಗಮನಸೆಳೆಯುತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಜನಪ್ರತಿನಿಧಿಗಳೂ ಈ ವಿಷಯದತ್ತ ಕಿವಿಗೊಡದೇ ಸುಮ್ಮನಿರುವುದು ಜನರ ವಿಶ್ವಾಸದ ಮೇಲೆ ದೊಡ್ಡ ಹೊಡೆತವಾಗಿದೆ.
“ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಕೇವಲ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಲ್ಲ. ಪ್ರತಿದಿನವೂ ಅದರ ನಿಖರ ಸ್ಥಿತಿಗೆ ಕಾಳಜಿ ವಹಿಸುವುದು ಅಧಿಕಾರಿಗಳ ಧರ್ಮವಾಗಿದೆ,” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದುರ್ಬಲತೆ, ನಿರ್ಲಕ್ಷ್ಯ ಮತ್ತು ಅಪಾರದ ದಾಯಕ ಪರಿಸ್ಥಿತಿ ವ್ಯವಸ್ಥೆಯನ್ನು ತಕ್ಷಣ ಸರಿಪಡಿಸಿ, ಧ್ವಜದ ಕಂಬವನ್ನು ಪುನರ್‌ಸ್ಥಾಪನೆ ಮಾಡುವಂತೆ ಜನತೆ ಆಕ್ರೋಶವ್ಯಕ್ತ ಪಡಿಸಿದ್ದಾರೆ. ಇಲ್ಲದಿದ್ದಲ್ಲಿ ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಗಳಲ್ಲಿ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರಗೌರವವನ್ನು ಕಾಪಾಡುವುದು ಕೇವಲ ಮಾತುಗಳಲ್ಲಿ ಅಲ್ಲ ಪ್ರತ್ಯಕ್ಷ ಕ್ರಿಯೆಯಲ್ಲಿ ತೋರಿಸಬೇಕಿದೆ!
