September 9, 2025
sathvikanudi - ch tech giant

ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಬೇಸತ್ತು, ಬಾಷಾ ಸಾಹೇಬ್ಚರಂಡಿಯನ್ನು ತಾವೇ ಸ್ವಚ್ಛಗೊಳಿಸಿದರು…

Spread the love

ಪಾವಗಡ ಪಟ್ಟಣದ 22ನೇ ವಾರ್ಡಿನ ಕಾನ್ಮನೆ ಕೆರೆ ಪ್ರದೇಶದ ಮಸೀದಿ ಹಿಂಭಾಗದಲ್ಲಿ ಬಾಷಾ ಸಾಹೇಬ್ ಅವರ ಮನೆ ಮುಂಭಾಗದ ಚರಂಡಿಯಲ್ಲಿ ತ್ಯಾಜ್ಯ ತುಂಬಿ ದುರ್ನಾತ ಪರಿಸ್ಥಿತಿ ಉಂಟಾಗಿತ್ತು. ಈ ಸಮಸ್ಯೆಯನ್ನು ಬಾಷಾ ಸಾಹೇಬ್ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಬೇಸತ್ತು, ಬಾಷಾ ಸಾಹೇಬ್ ತಮ್ಮ ಮನೆಯ ಮುಂದೆ ಇರುವ ಚರಂಡಿಯನ್ನು ತಾವೇ ಇಳಿದು ಸ್ವಚ್ಛಗೊಳಿಸಿದರು.

ಬಾಷಾ ಸಾಹೇಬ್ ಅವರ ಈ ಸಾಮಾಜಿಕ ಜವಾಬ್ದಾರಿ ಮತ್ತು ಸ್ವಚ್ಛತೆಗೆ ಬೆಲೆಕೊಟ್ಟು, ಅಲ್ಲಿನ ಸಾರ್ವಜನಿಕರು ಮತ್ತು ಹತ್ತಿರದ ನೆರೆಹೊರೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಈ ಕೆಲಸದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಬಾಷಾ ಸಾಹೇಬ್ ಅವರ ಈ ಕಾರ್ಯದಿಂದ ಇತರರಿಗೆ ಕೂಡಾ ಪ್ರೇರಣೆ ದೊರೆಯುವಂತಾಗಿದೆ.

ಅವರ ಈ ಶ್ರಮದಿಂದ ಚರಂಡಿಯ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರಗೊಂಡರೂ, ಪುರಸಭೆ ಅಧಿಕಾರಿಗಳು ಈ ಬಗ್ಗೆ ದೀರ್ಘಕಾಲಿಕ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಬಾಷಾ ಸಾಹೇಬ್ ಅವರ ಈ ಹೊಸ್ತಿಲು ಕೂಡಾ ಎಲ್ಲಾ ನಾಗರಿಕರಿಗೆ ತಮ್ಮ ಪರಿಸರದ ಸ್ವಚ್ಛತೆಗೆ ತಾವುಲ್ಲಿಯೂ ಹೊಣೆ ಹೊಂದಬೇಕೆಂಬ ಸಂದೇಶವನ್ನು ನೀಡಿದೆ.

WhatsApp Image 2025-06-21 at 19.57.59
Trending Now