
23.ಮಾರ್ಚ್ :ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಾನ್ಯ ಶ್ರೀ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್. ಅವರ ನಿರ್ದೇಶನದಂತೆ, ಚಳ್ಳಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ರಾಜಣ್ಣ .ಟಿ ಮತ್ತು ಶ್ರೀ ವಸಂತ್ ವಿ. ಅಸೋಡೆ ಮಾರ್ಗದರ್ಶನದಲ್ಲಿ, ಮೊಳಕಾಲ್ಲೂರು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.
ಮೊಳಕಾಲ್ಲೂರು ಠಾಣೆಯ ಪಿಎಸ್‌ಐ ಈರೇಶ್ ಮತ್ತು ಪಾಂಡುರಂಗ ಹಾಗೂ ಅವರ ತಂಡವು ನಿಖರವಾದ ಮಾಹಿತಿಯ ಮೇರೆಗೆ ಬೈರಾಪುರ ಮತ್ತು ಹಿರೇಕೆರಹಳ್ಳಿ ಗ್ರಾಮಗಳ ಮಧ್ಯದಲ್ಲಿರುವ ವಿಭೂತಿ ಗುಡ್ಡದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಸ್ಥಳೀಯ ಮೂಲದ ಒಟ್ಟು 09 ಜನರನ್ನು ಬಂಧಿಸಲಾಗಿದೆ.
ಈ ನಿಧಿ ಅಗೆದ ದಂಧೆ ಪತ್ತೆ ಮಾಡಲು ಬಳಸಿದ ತಂತ್ರಜ್ಞಾನ ಮತ್ತು ಪೊಲೀಸ್ ಬುದ್ಧಿಮತ್ತೆ ಪ್ರಶಂಸನೀಯವಾಗಿದೆ. ಆರೋಪಿತರಿಂದ ಇನ್ನೋವಾ ಕಾರು, ಜನರೇಟರ್, ಡ್ರಿಲ್ಲಿಂಗ್ ಮಿಷನ್, ವೈನ್, ಸಲಾಕ ಸೇರಿದಂತೆ ಹಲವು ಉಪಕರಣಗಳು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಮುಖ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನಿನ ಆಳ್ವಿಕೆ ಕಾಯ್ದುಕೊಳ್ಳಲು ಪೊಲೀಸರು ನಡೆಸಿದ ಈ ಕಾರ್ಯವು ಪ್ರಮುಖ ಸಾಧನೆ ಎಂದು ಪರಿಗಣಿಸಲಾಗಿದೆ.