September 9, 2025
sathvikanudi - ch tech giant

ಬೇಳತಂಗಡಿ: ಸಹೋದರಿ ಸೌಜನ್ಯಳ ಭೀಕರ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗದೆ 13 ವರ್ಷ: ರಾಜ್ಯದಲ್ಲಿ ಮಹಿಳೆಯ ಮಾನ ಪ್ರಾಣಕ್ಕೆ ಬೆಲೆ ಇಲ್ಲ!

Spread the love



ಬೆಳತಂಗಡಿ : ಬೆಳತಂಗಡಿಯಂತಹ ಕುಗ್ರಾಮದಲ್ಲಿ ನಡೆದ ಭೀಕರ ಕೊಲೆ ಹಾಗೂ ಅತ್ಯಾಚಾರ ಪ್ರಕರಣ 13 ವರ್ಷ ಕಳೆದರೂ ನಮ್ಮ ಮನೆ ಮಗಳು ನಮ್ಮ ಸಹೋದರಿಯ ಭೀಕರ ಕೊಲೆಗೆ ನ್ಯಾಯ ಸಿಗಲೇ ಇಲ್ಲ 2012ರ ಅಕ್ಟೋಬರ್ ಒಂಬತ್ತರಂದು ಕಾಲೇಜಿಗೆ ತೆರಳಿದ್ದ ಸೌಜನ್ಯ ಅದೆಷ್ಟು ಹೊತ್ತು ಆದರೂ ಮನೆಗೆ ತೆರಳದೆ ಮನೆಯವರು ಊರು ಕೆರೆಯವರು ಎಲ್ಲರೂ ಸೇರಿ ಹುಡುಕಿದಾಗ ಸೌಜನ್ಯ ಸಿಕ್ಕಿದ್ದು ಹೆಣವಾಗಿ ಅದು ಅವಳನ್ನು ಭೀಕರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.

ಧರ್ಮಸ್ಥಳದಲ್ಲಿ ವಿಚಿತ್ರ ವಿಕೃತವಾಗಿ ಹತ್ಯೆಗೀಡಾಗಿದ್ದು ಸೌಜನ್ಯಳನ್ನು ಕೊಂದ ಆ ಹಂತಕರು ಯಾರು ಅನ್ನೋದನ್ನ ಕಂಡುಹಿಡಿಯಲು ಪೊಲೀಸ್ ವ್ಯವಸ್ಥೆಯಾಗಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಆಗಲಿ ಸಾಧ್ಯವೇ ಆಗದ ಹಾಗಾಗಿದೆ ಕಾರಣವೇನೆಂದರೆ ಅಂದಿನ ಪಿಎಸ್ಐ ಯೋಗೀಶ್ ಸರಿಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸದೆ ಈ ಕೇಸನ್ನು ಮುಚ್ಚಿ ಹಾಕುವ ಹುನ್ನಾರವನ್ನು ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಯೋಗೇಶ್ ರಾಜಕೀಯ ಪ್ರಭಾವಗಳು ಹಾಗೂ ಕೊಲೆ ಮತ್ತು ಅತ್ಯಾಚಾರ ಮಾಡಿದ ಅತ್ಯಾಚಾರಿಗಳಿಗೆ ಕೈಜೋಡಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಇಲ್ಲದೆ ಹೋದರೆ ಅಂದು ಸೌಜನ್ಯಾಳ ದೇಹದಲ್ಲಿ ಸಿಕ್ಕಿರುವ ಡಿಎನ್ಎಗಳನ್ನು ಅದೇ ಕೂಡಲೆ ಲ್ಯಾಬಿಗೆ ಕಳಿಸದೇ ತನ್ನ ಕರ್ತವ್ಯ ಲೋಪವನ್ನು ಎಸೆಗಿರುವುದು ಸ್ಪಷ್ಟವಾಗಿರುತ್ತದೆ ಯಾಕೆಂದರೆ ಆತ ಅತ್ಯಾಚಾರಿಗಳು ಯಾರು ಇದ್ದಾರೆ ಅವರ ಜೊತೆ ಕೈಜೋಡಿಸಿ ಅಲ್ಲದೆ ಪ್ರಭಾವಿ ರಾಜಕಾರಣಿಗಳ ಕೈವಾಡವು ಇದರಲ್ಲಿ ಇದು ರಾಜಕಾರಣಿಗಳು ಸಹ ಈ ಕೇಸ್ ಅನ್ನು ಮುಚ್ಚಿ ಹಾಕಲು ಪ್ರಯತ್ನಪಟ್ಟಿರುವುದು ಸ್ಪಷ್ಟವಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಫೇಸ್ಬುಕ್ ಹಾಗೂ ವಾಟ್ಸಪ್ ಗಳಲ್ಲಿ ನಿರಂತರವಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ಪ್ರಜ್ಞಾವಂತ ಸಾರ್ವಜನಿಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಅಂದು ತನ್ನ ಮಗಳು ಶವವಾಗಿ ತನ್ನ ಕೈ ಸೇರುವಾಗ ಆ ತಂದೆ ತಾಯಿಯ ಪರಿಸ್ಥಿತಿ ಹೇಗಾಗಿರಲು ಬೇಡ ಒಂದು ಬಾರಿ ಯೋಚನೆ ಮಾಡಿ……!

ಎಲ್ಲೋ ಒಂದು ಕಡೆ ಮಕ್ಕಳು ಅಸಹಜವಾಗಿ ಸತ್ತಾಗ ತಂದೆ ತಾಯಿಯ ರೋಧನೆ ನೋಡಲಾಗುವುದಿಲ್ಲ ಅಂತಹದ್ದರಲ್ಲಿ ಸೌಜನ್ಯ ಅತ್ಯಾಚಾರವಾಗಿ ಒಲೆಯಾಗಿ ಬಿದ್ದಿರುವ ಆ ಮಗಳನ್ನು ತಂದು ಯಾವ ಸಂಸ್ಕಾರ ಮಾಡುವಾಗ ಆ ಕುಟುಂಬಸ್ಥರ ಅಕ್ರಂದನ ಎಷ್ಟರಮಟ್ಟಿಗೆ ಮುಗಿದು ಮುಟ್ಟಿರಬೇಕು ಎನ್ನುವುದನ್ನು ಒಂದು ಬಾರಿ ಯೋಚನೆ ಮಾಡಿದರೆ ಸೌಜನ್ಯಳನ್ನು ಕುಕ್ಕಿ ತಿಂದ ಆ ನರ ಹಂತಕ ಹದ್ದುಗಳನ್ನು ಸಮಾಜದ ಎದುರು ತಂದು ಶಿಕ್ಷೆಗೆ ಗುರಿ ಪಡಿಸಿ ಸೌಜನ್ಯಾಳಿಗೆ ನ್ಯಾಯ ಒದಗಿಸಿಕೊಡುವುದೇ ಸಾರ್ವಜನಿಕರ ಗುರಿಯಾಗಿದೆ.

ಸೌಜನ್ಯಳ ಪರವಾಗಿ ಹೋರಾಟ ಮಾಡುತ್ತಿರುವ ಹೋರಾಟಗಳನ್ನು ಹಾಗೂ ಇದೇ ವಿಚಾರವಾಗಿ ವರದಿ ಮಾಡಿದ ವರದಿಗಾರರು ಹಾಗೂ ಸಂಪಾದಕರು ಅಲ್ಲದೆ ಅನೇಕ ಮಾಧ್ಯಮಗಳು ಯೂಟ್ಯೂಬರ್ಸ್ ಗಳ ವಿರುದ್ಧ  ನ್ಯಾಯಾಂಗದಿಂದ ತಡೆ ಆಜ್ಞೆ ತರಲಾಗಿತ್ತು.

ಇತ್ತೀಚೆಗಷ್ಟೇ ಸೌಜನ್ಯಳ ಪರವಾಗಿ ಬ್ಯಾಟಿಂಗ್ ಮಾಡಿದ ಸಮೀರ್ ವಿರುದ್ಧ ಸಮರ ಸಾರಿದ ಬಳಿಕ ಆತನನ್ನು ಕೊಲೆ ಮಾಡೋದಾಗಿ ಜೀವ ಬೆದರಿಕೆ ಬಂದಿರುವ ಮಾಹಿತಿಗಳು ದೊರೆತಿದೆ. ಇದೇ ರೀತಿ ಸೌಜನ್ಯ ಪರವಾಗಿ ಧ್ವನಿ ಎತ್ತುವ ಎಲ್ಲರ ದನಿಯನ್ನು ಅಡಗಿಸುವ ಪ್ರಯತ್ನಗಳು ನಡೆದಿದ್ದು ಅಲ್ಲದೆ ಮುಂದಿನ ದಿನಗಳಲ್ಲಿ ಶಾಲೆಗೆ ಹೋದ ಮಕ್ಕಳು ಮನೆಗೆ ಬರುವುದಿಲ್ಲ ಎನ್ನುವುದೇ ದುರಂತ ಕಥೆಯಾಗುತ್ತದೆ.

ಸೌಜನ್ಯ ಅಳಿಗೆ ನ್ಯಾಯ ಒದಗಿಸಬೇಕಾದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಅತ್ಯಾಚಾರ ಮಾಡಿದ ಬಲಿಷ್ಠರನ್ನು ಬಚಾವ್ ಮಾಡಲು ನೊಂದವರನ್ನು ಮೆಟ್ಟಿ ನಿಂತು ಅನ್ಯಾಯವೆಸಗುತಿದೆ ಎಂಬುದು ಇದೆ ಇದರ ರಹಸ್ಯ..!


ಸೌಜನ್ಯಳ ಅತ್ಯಾಚಾರ ಹಾಗೂ ಕಲೆ ಪ್ರಕರಣದ ವಿಚಾರವಾಗಿ ಕೆಲವೊಂದು ಕಿಡಿಗೆಡಿಗಳು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಪ್ಪ್ ಗಳಲ್ಲಿ ಬಾಯಿಗೆ ಬಂದ ಹಾಗೆ ಕೇಸಿನ ವಿಚಾರ ದಿಕ್ಕು ದಾರಿ ಗೊತ್ತಿಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುವ ವಿಚಾರಗಳು ಬೆಳಕಿಗೆ ಬಂದಿದೆ.

ಅದರ ಜೊತೆಯಲ್ಲಿ ಕೇಸ್ ಅನ್ನು ಮುಚ್ಚಿ ಹಾಕುವ ಪ್ರಯತ್ನಗಳು ಹಾಗೂ ಸಾಕ್ಷಿ ನಾಶ ಮಾಡುವಂತಹ ಕೆಲಸಗಳು ಕಂಡುಬಂದಿದ್ದು, ಅಂತವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದ್ದು ಕೂಡಲೇ ಸರ್ಕಾರ ಇದರ ಬಗ್ಗೆ ಹೆಚ್ಚು ಕೊಂಡು ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸೌಜನ್ಯ ಪರವಾಗಿ ಹೋರಾಟ ಮಾಡುವ ಹೋರಾಟಗಾರರಿಗೆ ರಕ್ಷಣೆ ನೀಡ ಬೇಕು ಎಂದು ಸಾರ್ವಜನಿಕರು ಖಡಕ್ಕಾಗಿ ಸರ್ಕಾರಕ್ಕೆ ತಿಳಿಸಿದ್ದಾರೆ .

ಬೆಳ್ತಂಗಡಿ ಭಾಗಗಳಲ್ಲಿ ಅಷ್ಟೊಂದು ಕೊಲೆ ಸುಲಿಗೆ ಅತ್ಯಾಚಾರ ಹತ್ಯೆಗಳು ಹೇಗೆ ನಡೆಯುತ್ತಿವೆ? ಸಹೋದರಿ ಸೌಜನ್ಯಳ ಹತ್ತಿ ಮಾಡಿದವರು ಯಾರು ಆ ನರ ಹಂತಕರಾದರು ಯಾರು? ಆ ವಿಕೃತ ಕಾಮುಕರು ಯಾರಿರಬಹುದು ಅವರಿಗೆ ಶಿಕ್ಷೆ ಯಾವಾಗ ಈ ಎಲ್ಲದರ ಬಗ್ಗೆ ಉತ್ತರ ಕೊಡಲಾಗದಷ್ಟು ಒಂದು ಹೆಣ್ಣಿನ ಕೊಲೆಗೆ ನ್ಯಾಯ ಕೊಡಲಾಗದಷ್ಟು ಕೀಳು ಮಟ್ಟಕ್ಕೆ ನಮ್ಮ ಭಾರತದಲ್ಲಿ ವಿಕೃತ ಮನಸ್ಸು ಸ್ಥಿತಿಗಳು ಕಾನೂನನ್ನೇ ಕೊಂಡುಕೊಳ್ಳುವ ಪರಿಸ್ಥಿತಿಯನ್ನು ಕಣ್ಣಾರೆ ನೋಡುತ್ತಿದ್ದರೆ ನಾವು ಸ್ವತಂತ್ರ ಭಾರತದಲ್ಲಿ ಇದ್ದೇವೆ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸರ್ಕಾರ ನೇಮಿಸಿರುವ ಅಧಿಕಾರಿಗಳೇ ಸೌಜನ್ಯಾಳ ಕೇಸಿನ ತಿರುವು ದಾರಿಯನ್ನು ದಿಕ್ಕನ್ನು ತಪ್ಪಿಸುವಲ್ಲಿ ಯಶಸ್ವಿಯಾದ ಉದಾಹರಣೆಗಳು ಎಲ್ಲರಿಗೂ ತಿಳಿದ ವಿಚಾರ ಹಾಗೆಯೇ ಈ ಕೇಸ್ ಅನ್ನು ಮುಚ್ಚಿಹಾಕಲು ದೊಡ್ಡ ಮಟ್ಟದ ಹುನ್ನಾರವನ್ನು ಮಾಡಲು ಸರ್ಕಾರ ಸಹ ಇದರ ಹಿಂದೆ ಬಿದ್ದಿದೆ ಎನ್ನುವ ವಿಚಾರಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬಂದಿದ್ದು ಸಾರ್ವಜನಿಕರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಇಡೀ ದೇಶಾದ್ಯಂತ ಜನರೇ ತಿರುಗಿ ನಿಲ್ಲಲಾಗುವುದು ಎಂದು ಈ ಮೂಲಕ ತಿಳಿಸಿದ್ದಾರೆ.

WhatsApp Image 2025-06-21 at 19.57.59
Trending Now