September 10, 2025
sathvikanudi - ch tech giant

ಗುಬ್ಬಿ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತು ವಾಹನ ಚಾಲನೆ ಸ್ಥಿಗೀತಾ……

Spread the love

ತುಮಕೂರು ಜಿಲ್ಲೆ ಯಾದ್ಯಂತ ಸುರಿದ ಭಾರಿ ಮಳೆಗೆ ಗುಬ್ಬಿಯ ರೈಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿ ಹೋಗಿದೆ. ಇದರಿಂದಾಗಿ, KSRTC ಬಸ್‌ವು ನೀರಿನ ತೀವ್ರ ಹಾನಿಗೆ ಒಳಗಾಗಿದ್ದು, ಬಸ್ ಚಾಲನೆ ಸ್ಥಗಿತಗೊಂಡಿದೆ.

ಪ್ರಯಾಣಿಕರು ಅಗ್ಗದ ಸಹಾಯದಿಂದ ಬಸ್ ಅನ್ನು ನೀರಿನಿಂದ ಹೊರ ಎಳೆದಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಉಂಟಾದ ಸಮಸ್ಯೆ ತೀವ್ರವಾಗಿದೆ.


ಚೇಳೂರು ಮತ್ತು ಬಿದರೆ ಪ್ರದೇಶಗಳಲ್ಲಿ ಗುಬ್ಬಿಕಡೆಗೆ ಸಂಚಾರವು ಮುಖ್ಯವಾದ ಮಾರ್ಗವಾಗಿದೆ, ಆದರೆ ಇತ್ತೀಚಿನ ಮಳೆಯ ಪರಿಣಾಮವಾಗಿ ಈ ಮಾರ್ಗದಲ್ಲಿ (ರೈಲ್ವೆ ಸೇತುವೆ) ನೀರಿನ ಪ್ರಮಾಣ ಹೆಚ್ಚಾ ತುಂಬುತ್ತಿದ್ದು , ವಾಹನ ಸಾಗಣೆಗೆ ತೊಂದರೆ ಆಗಿದ್ದು  ಮಳೆ ನೀರು ಸೇತುವೆಯಿಂದ ಹೊರ ಹೋಗಲು ಸುಸರ್ಜಿತ ವ್ಯವಸ್ಥೆ ಇಲ್ಲದ ಕಾರಣ, ಈ ಮಾರ್ಗದಲ್ಲಿ ಯಾವುದೇ ವಾಹನ ಸಾಗಿಸಲು ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿದ್ದು, ರಸ್ತೆ ನಿಖರವಾಗಿ ಚಾಲನೆಗೆ ಅಸಾಧ್ಯವಾಗಿದೆ.
ಹೆಚ್ಚಿನ ಮುಂಜಾಗ್ರತಾ ಕ್ರಮಗಳು ಮತ್ತು ತ್ವರಿತ ಪರಿಹಾರಗಳಿಲ್ಲದ ಕಾರಣ, ಸಾರ್ವಜನಿಕರು ಕಿರುಕುಳ ಅನುಭವಿಸುತ್ತಿದ್ದಾರೆ.

ಸಮಸ್ಯೆ ಪರಿಹರಿಸಲು ಸಂಬಂಧಿತ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ.ಇದರಿಂದ ತೊಂದರೆ ಅನುಭವಿಸಿತ್ತಿರುವ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು..

WhatsApp Image 2025-06-21 at 19.57.59
Trending Now