September 10, 2025
sathvikanudi - ch tech giant

ಚಾಮರಾಜನಗರಪೂಜೆ ಸಲ್ಲಿಸಿ ವಾಪಾಸಾಗುತ್ತಿದ್ದ ಒಂದೇ ಕುಟುಂಬದ ನಾಲ್ವರಿಂದ ವಿಷ ಸೇವನೆ: ಓರ್ವ ಮೃತ್ಯು

Spread the love

ಕೊಳ್ಳೇಗಾಲ(ಚಾಮರಾಜನಗರ): ಮಹದೇಶ್ವರ ಬೆಟ್ಟಕ್ಕೆ ಪೂಜೆ ಸಲ್ಲಿಸಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ, ಓರ್ವ ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ತಾಳಬೆಟ್ಟದಲ್ಲಿ ನಡೆದಿದೆ ಮಹದೇವ್ ನಾಯ್ಕ(50) ಮೃತಪಟ್ಟಿ ಪಟ್ಟಿದ್ದು, ಮೃತನ ಪತ್ನಿ ಗೌರಮ್ಮ (48) ಪುತ್ರಿ ಲೀಲವತಿ (40) ಮೊಮ್ಮಗಳು ರಿಷಿತ (17) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಚಂದಗಾಲು ಗ್ರಾಮದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿದ್ದಾರೆ.

ಇವರು ಮಹದೇಶ್ವರ ಬೆಟ್ಟಕ್ಕೆ ಪೂಜೆ ಸಲ್ಲಿಸಿ ಕಾಲ್ನಡಿಗೆಯಲ್ಲಿ ವಾಪಾಸು ಬರುತ್ತಿದ್ದರು ಎನ್ನಲಾಗಿದೆ. ಘಟನೆಗೆ ಕಾರಣ ಇನ್ನು ತಿಳಿದು ಬಂದಿಲ್ಲ.
ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ವಿಷ ಸೇವನೆ ಮಾಡಿದ್ದ ಕುಟುಂಬವನ್ನು ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಮಾಹಿತಿ ಪಡೆದು ಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಹನೂರು ತಾಲೂಕು ತಹಸೀಲ್ದಾರ್ ಗುರು ಪ್ರಸಾದ್ ,ಡಿ ವೈ ಎಸ್ ಪಿ ದರ್ಮೆಂದ್ರ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದವರಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

WhatsApp Image 2025-06-21 at 19.57.59
Trending Now