September 10, 2025
sathvikanudi - ch tech giant

ಶಾಸಕ ಕೆ. ಷಡಕ್ಷರಿ ಅವರಿಂದ ಕಾರ್ಮಿಕರಿಗೆ ಕಿಟ್ ವಿತರಣೆ!?

Spread the love



ತಿಪಟೂರು:

ಇಂದು ಕಾರ್ಮಿಕ ಇಲಾಖೆ, ಹಾಗೂ ದೇವರಾಜು ಅರಸು ನಿಗಮದ ವತಿಯಿಂದ ತಾಲ್ಲೂಕಿನ ನೊಂದಾಯಿತ  ಕಾರ್ಮಿಕರಿಗೆ ವೆಲ್ಡಿಂಗ್ ಕಿಟ್ ಮಹಿಳೆಯರಿಗೆ ಹೊಲಿಗೆ ಯಂತ್ರ ಸಾಮಾಗ್ರಿಗಳನ್ನು ಕ್ಷೇತ್ರದ ಶಾಸಕ  ಕೆ. ಷಡಕ್ಷರಿ ಅವರು ಪಟ್ಟಣದ ಸಾಮರ್ಥಸೌಧ ಸಭಾಂಗಣದಲ್ಲಿ ವಿತರಿಸಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಶಾಸಕರು   ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಉದ್ಯೋಗ ಕಾರ್ಯವೈಕರಿಗಳಲ್ಲಿ ಕಾರ್ಮಿಕರ ಪಾತ್ರ ದೊಡ್ಡದಿದ್ದು, ಈ ನಿಟ್ಟಿನಲ್ಲಿ ವೆಲ್ಡಿಂಗ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ ಸರ್ಕಾರ ಇಂತಹ ಸವಲತ್ತುಗಳನ್ನು ಕಾರ್ಮಿಕರಿಗೆ ಉಚಿತವಾಗಿ ಒದಗಿಸುತ್ತಿದ್ದು ಇಂತಹ ಸವಲತ್ತುಗಳನ್ನು ಕಾರ್ಮಿಕರು ಸದುಪಯೋಗ ಪಡೆದುಕೊಳ್ಳುವ ಮೂಲಕ ತಮ್ಮ ವೃತ್ತಿಯಲ್ಲಿ ಮುಂದುವರಿಯಬೇಕೆಂದು  ಅಭಿಪ್ರಾಯ ವ್ಯಕ್ತಪಡಿಸಿ ಎಲ್ಲಾ ಬಡ ಕಾರ್ಮಿಕರು ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು.

ಈ ಸಂದರ್ಭದಲ್ಲಿ. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ  ಸುದರ್ಶನ್ .ಹೇಮಂತ್. ಲೋಕನಾಥ್ ಸಿಂಗ್. ಕಾರ್ಮಿಕ ಇಲಾಖೆ ಅಧಿಕಾರಿಗಳು. ನಿಗಮದ ಅಧಿಕಾರಿಗಳು. ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿ ಮಂಜು ಗುರುಗದಹಳ್ಳಿ

WhatsApp Image 2025-06-21 at 19.57.59
Trending Now