
ಶಿವಮೊಗ್ಗ ನಗರ ಸೋಮಿನಕೊಪ್ಪ:
ಇಲ್ಲಿನ ಚೌಡಮ್ಮ ದೇವಿ ಮಂದಿರ ಹಾಗೂ ಪೆಟ್ರೋಲ್ ಬಂಕ್ ಎದುರುಗಡೆ ಇರುವ ದಿನಕ್ಕೆ ಸಾವಿರಾರು ಜನ ಓಡಾಡುವ ಮುಖ್ಯ ರಸ್ತೆಯ ಬದಿಯಲ್ಲಿ ಅಪಾಯಕಾರಿಯಾಗಿ ಒಣಗಿರುವ ಮರವೊಂದು ಪ್ರಾಣಹರಣಕ್ಕೆ ತುದಿಗಾಲಿನಲ್ಲಿ ಕಾದು ನಿಂತಿದೆ. ಈ ಮರ ಈಗಾಗಲೇ ಸಿತಿಲ ಸ್ಥಿತಿಯಲ್ಲಿ ಇರುವುದು, ಕೆಲವೇ ದಿನಗಳಲ್ಲಿ ಯಾರ ಮೇಲಾದರೂ ಬಿದ್ದು ದುರಂತಕ್ಕೀಡುವ ಸಾಧ್ಯತೆ ಬಹಳ ಹೆಚ್ಚು.ದಿನವಿಡೀ ಈ ರಸ್ತೆಯಲ್ಲಿ ಸಾವಿರಾರು ವಾಹನ ಶಾಲೆ ಮಕ್ಕಳು ವೃದ್ಧರು ಸಂಚಾರ ಹೆಚ್ಚಿರುವ ಈ ಪ್ರದೇಶದಲ್ಲಿ ಈ ಮರ ಅಪಾಯಕಾರಿಯಾಗಿ ನಿಂತಿದೆ ‘ಸಾವಿನ ಗಂಟೆ’ವನ್ನೇ ಹೊಡೆಯುತ್ತಿರುವಂತಾಗಿದೆ.
ಅರಣ್ಯ ಸಂರಕ್ಷಣೆ ಜವಾಬ್ದಾರಿ ಹೊತ್ತಿರುವ ಅರಣ್ಯಪಾಲಕರು ಹಾಗೂ ಸಂಬಂಧಿತ ಪಾಲಿಕೆ ಅಧಿಕಾರಿಗಳು ಈ ಕಡೆ ಸ್ವಲ್ಪ ಗಮನ ಹರಿಸಬೇಕಾದ ಅವಶ್ಯಕತೆ ಇದೆ. ದಿನದಿಂದ ದಿನಕ್ಕೆ ಇದು ಕೇವಲ ಒಣ ಮರವಲ್ಲ, ಯಾರದಾದರೂ ಬದುಕನ್ನು ಕಿತ್ತುಕೊಳ್ಳಬಹುದಾದ ಅಪಾಯಕಾರಿ ಮೃತ್ಯು ಮರವಾಗಿದೆ.
ಈ ಮಧ್ಯೆ, ನೆನ್ನೆಯಷ್ಟೇ ದುರಂತವೊಂದು ಎನ್.ಆರ್. ಪುರ ಬಳಿಯೂ ಸಂಭವಿಸಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮರದ ಕೊಂಬೆಯೊಂದು ಬಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.ಮೃತ ವ್ಯಕ್ತಿಯ ಪತ್ನಿ, ಮಗಳು, ಮಗ, ವೃದ್ಧ ತಾಯಿ–ತಂದೆ ಇಂತಹ ನೋವನ್ನು ಬದುಕಿನಲ್ಲಿ ಹೇಗೆ ಸಹಿಸುವರು? ಒಂದು ಕ್ಷಣದ ಅಜಾಗರೂಕತೆಯಿಂದ ಒಂದು ಕುಟುಂಬವೇ ಬೀದಿಪಾಲಾಗಿದೆ.
ಇದೊಂದು ಎಚ್ಚರಿಕೆಯ ಘಂಟೆ – ಇಂಥ ಅವ್ಯವಸ್ಥಿತ ಮರಗಳು ರಾಜ್ಯದ್ಯಾದಂತ ವಿವಿಧ ಭಾಗಗಳಲ್ಲಿ ಮಾನವರ ಜೀವವನ್ನು ಪಡೆಯಲು ಎದೂರು ನೋಡುತ್ತಿದೆ. ಈ ರೀತಿಯ ಪ್ರಾಣ ಹಾನಿ ರಾಜ್ಯದಲ್ಲಿ ಪ್ರತಿ ವರ್ಷ ಪದೇ ಪದೇ ಮಾರುಕಳಿಸುತ್ತಾಳೆ ಇದೆ ಆದರೆ ಸಂಬಂಧ ಪಟ್ಟ ಯಾವ ಅಧಿಕಾರಿಗಳ ಕಣ್ಣು ಇಂತಹ ವಿಷಯದ ಕಡೆ ಬೀಳುತ್ತಿಲ್ಲ? ಸರ್ಕಾರ, ಸ್ಥಳೀಯ ಸಂಸ್ಥೆಗಳು, ಹಾಗೂ ಅರಣ್ಯ ಇಲಾಖೆಗಳು ಮತ್ತು ಪಾಲಿಕೆ ಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ನಾಳೆಯ ದುಃಖದ ಸುದ್ದಿ ಇನ್ನೊಬ್ಬನ ಮನೆಯನ್ನೂ ಬೀದಿಗೆ ತಲ್ಲುವುದು ಖಚಿತ.
ಇನ್ನುಮುಂದಾದರೂ ಇಂತಹ ಘಟನೆಗಳು ಮರುಕಳಿಸದಂತೆ, ಮುಖ್ಯ ರಸ್ತೆಗಳ ಬದಿಗಳಲ್ಲಿರುವ ಒಣಗಿದ, ಕುಸಿಯುವ ಸ್ಥಿತಿಯಲ್ಲಿರುವ ಮರಗಳನ್ನು ತಕ್ಷಣವೇ ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ತ್ವರಿತಗೊಳಿಸಬೇಕಾಗಿದೆ. ಇದು ಕೇವಲ ಒಂದು ಪರಿಸರದ ಸಮಸ್ಯೆಯಲ್ಲ – ಮಾನವ ಪ್ರಾಣದ ಸಮಸ್ಯೆ. “ಮರ ಬಿದ್ದು ಪ್ರಾಣ ಹೋದರೆ ಅ ಜೀವಕ್ಕೆ ಹೊಣೆಯರು ಸ್ವಾಮಿ” ಅ ಕುಟುಂಬಕ್ಕೆ ಯಾವ ಇಲಾಖೆ ಉತ್ತರ ಕೊಡುತ್ತದೆ.
ಅ ವ್ಯಕ್ತಿಯನ್ನು ಕಾಯುತ್ತಿದ್ದ ಮನೆಯವರು ಇನ್ನು ಜೀವಂತ ಕನಸುಗಳೊಂದಿಗೆ ಬಾಳಲು ಸಾಧ್ಯವಿಲ್ಲ. ಈ ಕಥೆ ಮತ್ತೆ ಯಾರ ಮನೆಯ ಬಾಗಿಲನ್ನು ತಟ್ಟುವ ಮುನ್ನವೆ ಆ ಸಮಯಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತ ✍🏻✍🏻✍🏻✍🏻✍🏻