
ವರದಿ: ರಮೇಶ್ ಡಿಜೆ, ಆನಂದಪುರ
ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಶಿರಸಿ ಹಾಗೂ ಸಾಗರದ ಜಗನ್ಮಾತೆ ಶ್ರೀ ಮಾರಿಕಾಂಬ ದೇವಿಯ ಸಹೋದರಿಯಾದ ಆನಂದಪುರದ ಶ್ರೀ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ತವರು ಮನೆಯ ನೂತನ ಗರ್ಭಗುಡಿ ನಿರ್ಮಾಣ ಕಾರ್ಯ ಮಧ್ಯದ ಹಂತದಲ್ಲಿದ್ದು, ತೀವ್ರಗತಿಯಲ್ಲಿ ಸಾಗುತ್ತಿದೆ.
ಗುರುವಾರ ಬೆಳಗ್ಗೆ ಮುರುಡೇಶ್ವರದಿಂದ ಶ್ರೀ ದೇವಿಯ ಶಿಲಾ ವಿಗ್ರಹಗಳು ಆಗಮಿಸಿದ ಹಿನ್ನೆಲೆಯಲ್ಲಿ, ವಿಶೇಷ ಪೂಜೆಗಳೊಂದಿಗೆ ಶಿಲಾ ವಿಗ್ರಹ ತರುವ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ:
> “ಈ ಗರ್ಭಗುಡಿಯು ಸುಮಾರು ₹1 ಕೋಟಿಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಎಲ್ಲಾ ಕಾರ್ಯಗಳು ಸುಧಾರಿತವಾಗಿ ಸಾಗುತ್ತಿದ್ದು, ಡಿಸೆಂಬರ್ ಅಂತ್ಯದೊಳಗೆ ನೂತನ ಗರ್ಭಗುಡಿ ಸ್ಥಾಪನೆಯಾಗಲಿದೆ,” ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಈಶ್ವರ, ಜಯಪ್ಪಗೌಡ, ಗಣಪತಿ, ಬಸವರಾಜ್, ಮಧುಸೂದನ್ ಹಾಗೂ ಸ್ಥಳೀಯ ಗ್ರಾಮಸ್ಥರು, ಕಮಿಟಿಯ ಸದಸ್ಯರು ಉಪಸ್ಥಿತರಿದ್ದು ಶಿಲಾ ವಿಗ್ರಹ ತರುವ ಕಾರ್ಯದಲ್ಲಿ ಪಾಲ್ಗೊಂಡರು.
ದೇವಿಯ ತವರು ಮನೆ ಎಂಬ ಮಹತ್ವವನ್ನು ಹೊಂದಿರುವ ಈ ಪುಣ್ಯಭೂಮಿಯಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿರುವ ಈ ಪುಣ್ಯಕರ್ಮ ಗ್ರಾಮಸ್ಥರಲ್ಲಿ ಭಕ್ತಿಭಾವ ಹೆಚ್ಚಿಸಿದೆ.