
ಬೀದರ್, ಏಪ್ರಿಲ್ 17 (ಬುಧವಾರ):
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಪತ್ರಕರ್ತನೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯಲ್ಲಿ ದೊಡ್ಡ ಕುತೂಹಲವನ್ನು ಹುಟ್ಟಿಸಿದೆ. ನಡುರಾತ್ರಿಯಲ್ಲಿ ಗಿಡ ನೆಡುವುದು ಕುರಿತು ಪ್ರಶ್ನೆ ಕೇಳಿದಕ್ಕೆ ಪತ್ರಕರ್ತನನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, ಬೀದರ್‌ನ ವಿಮಾನ ನಿಲ್ದಾಣದಿಂದ ಗಾಂಧಿ ಗಂಜ್ ಮಾರ್ಗದವರೆಗೆ ಅರಣ್ಯ ಇಲಾಖೆ ಮುಂಜಾನೆ ನೋಡಿದಾಗ ಯಾವುದೇ ಗಿಡಗಳು ಇರಲಿಲ್ಲ. ಆದರೆ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಅಬ್ಬರವಾಗಿ ಗಿಡಗಳನ್ನು ನೆಡಲು ಪ್ರಾರಂಭಿಸಿದ್ದರು. ಇದನ್ನು ಕಂಡು ಕೆಲ ಸ್ಥಳೀಯ ಪತ್ರಕರ್ತರು, “ಈಷ್ಟು ನಡುರಾತ್ರಿ ಯಾಕೆ ಗಿಡ ನೆಡ್ತಾ ಇದ್ದೀರಾ?” ಎಂಬ ಪ್ರಶ್ನೆ ಕೇಳಿದರು.
ಈ ಪ್ರಶ್ನೆಗೆ ಅರಣ್ಯ ಸಿಬ್ಬಂದಿಯ ಪ್ರತಿಕ್ರಿಯೆ ಅಸಹನೀಯವಾಗಿದ್ದು, “ನಿ ಯಾರೋ ಬೋಳಿಮಗನೇ, ನಿನ್ ಲೆವೆಲ್ ಏನು?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ, ಇಬ್ಬರು ಸಿಬ್ಬಂದಿ ಪತ್ರಕರ್ತನ ಎದೆ ಅಂಗಿ ಹಿಡಿದು ತಳ್ಳಿದಾಗ, ಇನ್ನೊಬ್ಬ ಅಧಿಕಾರಿಯೊಬ್ಬರು ಅವರ ಕಪಾಳಕ್ಕೆ ಹೊಡೆದಿದ್ದಾರೆ. “ಈ ಮೀಡಿಯಾ ಸುಳಿಮಕ್ಕುಳದು” ಎಂದು ಹೇಳಿ, ಗದರಿಸುತ್ತಾ, ಪತ್ರಕರ್ತನನ್ನು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಬಂದು ಜಿಲ್ಲಾಧಿಕಾರಿ ಅರಣ್ಯ ಕಚೇರಿಗೆ ಕರೆದೊಯ್ದು, ಅಲ್ಲಿಂದ ಗಾಂಧಿಗಂಜ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಭೀಮ ಆರ್ಮಿ ಬೀದರ್ ಜಿಲ್ಲಾ ಸಮಿತಿ, “ಪತ್ರಿಕೋದ್ಯಮ ದೇಶದ ನಾಲ್ಕನೇ ಅಂಶವಾಗಿದ್ದು, ಪತ್ರಕರ್ತನಿಗೆ ಪ್ರಶ್ನೆ ಕೇಳುವ ಹಕ್ಕಿದೆ. ಅಧಿಕಾರಿಗಳೇ ಪತ್ರಕರ್ತನನ್ನು ಹಲ್ಲೆ ಮಾಡುವುದು ದೌರ್ಜನ್ಯವಾಗಿದೆ” ಎಂದು ಹೇಳಿದೆ. “ಇಂತಹ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ, ಅವರ ವಿರುದ್ಧ IPC ಕಾಯ್ದೆಯ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಭೀಮ ಆರ್ಮಿ ಜಿಲ್ಲಾಧ್ಯಕ್ಷರು ಒತ್ತಾಯಿಸಿದ್ದಾರೆ.
ಇದೇ ವೇಳೆ, ರಾಜ್ಯಾದ್ಯಂತ ಪತ್ರಕರ್ತ ಸಂಘಗಳು ಮತ್ತು ನಾಗರಿಕ ಹಕ್ಕು ಪರ ಸಂಘಟನೆಗಳು ಘಟನೆಯನ್ನು ಖಂಡಿಸುತ್ತಾ, ಪ್ರಜಾಪ್ರಭುತ್ವದ ಮೂಲ ಮೌಲ್ಯಗಳನ್ನು ಉಳಿಸಿಕೊಳ್ಳಬೇಕೆಂಬ ಮನವೊಂದನ್ನು ಸರ್ಕಾರಕ್ಕೆ ಸಲ್ಲಿಸಿವೆ. ಪ್ರಕರಣದ ತಕ್ಷಣದ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂಬುದಾಗಿ ಆಗ್ರಹಿಸಿ, ಮುಂದಿನ ದಿನಗಳಲ್ಲಿ ಹೋರಾಟ ಘೋಷಿಸುವ ಸಾಧ್ಯತೆ ಇದೆ. ಎಂದು ಮೂಲಗಳಿಂದ ತಿಳಿದು ಬಂದಿದೆ
