
ತುಮಕೂರು :
ತುರುವೇಕೆರೆ: ಶ್ರೀ ಆದಿಜಾಂಬವ ಪರಿಶಿಷ್ಟ ಜಾತಿ ವಿಭಿದೋದ್ದೇಶ ಸಹಕಾರ ಸಂಘ ನಿಯಮಿತ ಗೆ ಹೊಸ ಅಧ್ಯಾಯದ ಆರಂಭವಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆ ತಾಲೂಕುಗಳನ್ನು ಒಳಗೊಂಡಿರುವ ಸಂಘದ ನೂತನ ಆಡಳಿತ ಮಂಡಳಿ ರಚನೆಯು ಶಾಂತಿಯುತವಾಗಿ ಜರುಗಿದ್ದು, ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ತಿಪಟೂರಿನ ಕೇಂದ್ರ ಸ್ಥಾನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಂ.ಎಸ್. ಮಹದೇವಯ್ಯ (ಅಧ್ಯಕ್ಷ), ಶಂಕರಪ್ಪ, ಎಮ್.ಎನ್. ಮಹದೇವ, ನರಸಿಂಹಮೂರ್ತಿ, ಪಟ್ಟಾಭಿರಾಮು ಟಿ.ಕೆ., ರಾಜಶೇಖರ, ತಿಪಟೂರು ಕೃಷ್ಣ, ಪುರುಷೋತ್ತಮ್, ಏನ್. ಗೀತಾಮಣಿ, ಜಯಶೀಲ ಅವರನ್ನು ತಿಪಟೂರು ತಾಲೂಕಿನ ಪರವಾಗಿ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ತುರುವೇಕೆರೆ ತಾಲೂಕಿನ ಪರವಾಗಿ ಗೋವಿಂದಯ್ಯ, ಕೆಇಬಿ ಧನಂಜಯ, ಡಾ. ಚಂದ್ರು ತೊರೆಮಾವಿನಹಳ್ಳಿ ಅವರನ್ನು ನಿರ್ದೇಶಕರಾಗಿ ಘೋಷಿಸಲಾಯಿತು.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸುಮಿತ್ರ ಕೆ ಅವರು ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಘೋಷಿಸಿದರು. ನೂತನ ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು ಮತ್ತು ಸಾಂಪ್ರದಾಯಿಕವಾಗಿ ಅಭಿನಂದನೆ ಸಲ್ಲಿಸಲಾಯಿತು.
ಸಂಘದ ನೂತನ ನೇತೃತ್ವದಿಂದ ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ವರದಿ: ಮಂಜುನಾಥ್ ಕೆ ಎ, ತುರುವೇಕೆರೆ
