September 10, 2025
sathvikanudi - ch tech giant

ಅರಣ್ಯಧಿಕಾರಿಗಳಿಂದ ಉತ್ತಮ ಕಾರ್ಯಾಚರಣೆ: ಲಾರಿ ಸಮೇತ ಆಕೇಶಿಯ ನಾಟ ವಶ.!?

Spread the love



ಶಿರಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬುಧವಾರ (08.01.2025) ಸಂಜೆ ನಾಲ್ಕು ಗಂಟೆಗೆ ಅರಣ್ಯ ಸಂಚಾರಿ ದಳ ನಡೆಸಿದ ದಾಳಿಯಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಆಕೇಶಿಯ ನಾಟಗಳನ್ನು ಲಾರಿ ಸಮೇತ ವಶಕ್ಕೆ ಪಡೆಯಲಾಗಿದೆ.

ಲಾರಿ ನಂಬರ್ KA 23-ಎ 4226ದಲ್ಲಿ ನಗರದಲ್ಲಿ ಶಂಕಿತವಾಗಿ ಸಾಗಿಸಲಾಗುತ್ತಿದ್ದ ಆಕೇಶಿಯ ನಾಟಗಳ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಅರಣ್ಯ ಸಂಚಾರಿ ದಳವು ಚಂದನ್ ವುಡ್ ವರ್ಕ್ಸ್ ಮತ್ತು ಫರ್ನಿಚರ್ ಹತ್ತಿರ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಶಿರಸಿ ಸಂಚಾರಿ ಅರಣ್ಯ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಎ ಎಚ್ ಅವರೊಂದಿಗೆ ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ್ ನಾಯ್ಕ ಹಾಗೂ ಸಂಚಾರಿ ದಳದ ಆರ್‌ಎಫ್‌ಒ ಶ್ರೀಮತಿ ಶಿಲ್ಪ ನಾಯ್ಕ್ ಭಾಗವಹಿಸಿದರು.

ಕಾರ್ಯಾಚರಣೆಯಲ್ಲಿ, ಆರೋಪಿಗಳಾದ ಮಾದೇವ ಆರ್.ವಿ (ಚಿಕ್ಕಳ್ಳಿ, ತಾ: ಕಾಗಲ್, ಜಿಲ್ಲೆ: ಕೊಲ್ಲಾಪುರ, ಮಹಾರಾಷ್ಟ್ರ) ಮತ್ತು ಜಗದೀಶ್ ಮಾದೇವ ಗುಡಿಗಾರ್ (ಕೊಪ್ಪಳ ಕಾಲನಿ, ಶಿರಸಿ) ಅವರನ್ನು ದಸ್ತಗಿರಿ ಮಾಡಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಈ ಕಾರ್ಯಾಚರಣೆ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಮತ್ತು ಅಕ್ರಮ ವ್ಯಾಪಾರವನ್ನು ತಡೆಗಟ್ಟುವ ಉದ್ದೇಶವನ್ನು ಶ್ರೇಷ್ಠವಾಗಿ ಪೂರೈಸಿದ್ದು, ಶಿರಸಿ ಅರಣ್ಯ ಸಂಚಾರಿ ದಳದ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

WhatsApp Image 2025-06-21 at 19.57.59
Trending Now