September 10, 2025
sathvikanudi - ch tech giant

ನಗರದಲ್ಲಿ ಎಚ್ಚಾಗುತ್ತಿರುವ ಗಾಂಜಾ ಪ್ರಕರಣಗಳು…!?

Spread the love

ಶಿವಮೊಗ್ಗ :

ನಗರದ ನಂಜಪ್ಪ ಲೇಔಟ್ ಬಳಿ ಮಾಲ್ ಗೆ ಹೋಗಲು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೆ ಬೈಕ್ ನಲ್ಲಿ ಬಂದ ಮೂವರು ಯುವಕರು ಡಿಕ್ಕಿ ಹೊಡೆದು ಕಿರಿಕ್ ತೆಗೆದಿರುವ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಧಾಖಲಾಗಿದೆ.

ಈ ಘಟನೆ ಪ್ರಿಯಾಂಕ ಬಡಾವಣೆಯ ಬಳಿ ನಡೆದಿದೆ, ಅಲ್ಲಿ ಇಂಜಿನಿಯರ್‌ ಒಬ್ಬರು ಮಾಲ್ ಗೆ ಹೋಗಿ ವತ್ತು ಖರೀದಿ ಮಾಡಿದ ನಂತರ ತಮ್ಮ ಕಾರಿನಲ್ಲಿ ಬಂದು ಕೂರುವಷ್ಟರಲ್ಲೇ ಯುವಕರು ಅವರ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದಲ್ಲದೆ ಕಣ್ಣಿಗೆ ಕಾಣೋಲ್ವಾ ಎಂದು ಕಿರಿಕ್ ತೆಗೆದುಕೊಂಡಿದ್ದಾರೆ.

ಆ ಮೂಲಕ, ಅಸಭ್ಯತೆಯಿಂದ ಇಬ್ಬರು ಯುವಕರು ಕಾರು ಮಾಲೀಕರಿಗೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳೀಯರು ಮತ್ತು ಸ್ನೇಹಿತರ ಸಹಾಯದಿಂದ ಜಗಳವನ್ನು ಬಿಡಿಸಿದ್ದಾರೆ, ನಂತರ ಇಂಜಿನಿಯರ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು.

ಡಿಕ್ಕಿ ಹೊಡೆದ ಯುವಕರನ್ನು ಅಭಿಷೇಕ್ ಮತ್ತು ನಂದನ್ ಎಂದು ಗುರುತಿಸಲಾಗಿದೆ, ಆದರೆ ಮೂರನೇ ವ್ಯಕ್ತಿಯ ಬಗ್ಗೆ ಇನ್ನಷ್ಟು ಮಾಹಿತಿ ದೊರಕಬೇಕಾಗಿದೆ. ಈ ಮೂವರು ಯುವಕರು ಗಾಂಜಾ ನಶೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಹಾನಿ ಉಂಟುಮಾಡಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ… ✍🏻✍🏻

WhatsApp Image 2025-06-21 at 19.57.59
Trending Now