
ಮಂಡ್ಯ :
ಜಿಲ್ಲೆಯ ಅಂಧತ್ವ ನಿಯಂತ್ರಣ ಸಂಸ್ಥೆ ಮತ್ತು ಮೈಸೂರು ರೇಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ಲೆನ್ಸ್ (ಮಸೂರ) ಅಳವಡಿಸುವ ಸೌಲಭ್ಯವಿದೆ.
ಶಿಬಿರವನ್ನು 2025ರ ಏಪ್ರಿಲ್ 17ನೇ ಗುರುವಾರ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಕಣ್ಣಿನ ಸಮಸ್ಯೆಗಳನ್ನು ಹೊಂದಿರುವ ಸಾರ್ವಜನಿಕರು ಈ ಸದುಪಾಯವನ್ನು ತಪ್ಪದೆ ಬಳಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಶಿಬಿರಾರ್ಥಿಗಳಿಗೆ ಪ್ರಮುಖ ಸೂಚನೆಗಳು:
- ತಪಾಸಣೆಗೆ ಬರುವವರು ತಮ್ಮ ಪೂರ್ಣ ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಬಿಳಿ ಕಾಗದದಲ್ಲಿ ಸ್ಪಷ್ಟವಾಗಿ ಬರೆದು ತರಬೇಕು.
- ಶಸ್ತ್ರ ಚಿಕಿತ್ಸೆ ಅಗತ್ಯವಿರುವವರು ಮರುದಿನ ಮೈಸೂರಿನ ಎಂ.ಆರ್.ಸಿ. ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಯ ನಂತರ ಉಚಿತ ಕನ್ನಡಕವನ್ನೂ ನೀಡಲಾಗುತ್ತದೆ.
- ಶಿಬಿರದ ದಿನ ಸ್ನಾನ ಮಾಡಿ ಶುದ್ಧವಾದ ಬಟ್ಟೆ ಧರಿಸಿ ಬರುವಂತೆ ವಿನಂತಿಸಲಾಗಿದೆ. ಊಟದ ವ್ಯವಸ್ಥೆಯೂ ಮಾಡಲಾಗಿದೆ.
- ಶಿಬಿರದಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಇತ್ಯಾದಿಗಳ ಜೆರಾಕ್ಸ್ ಪ್ರತಿಗಳನ್ನು ತರಬೇಕು.
- ಹೃದಯ ಕಾಯಿಲೆ, ಬಿಪಿ, ಅಸ್ತಮಾ, ಸಕ್ಕರೆ ಕಾಯಿಲೆ ಇರುವವರು ಶಸ್ತ್ರಚಿಕಿತ್ಸೆಗೆ ಯಾವುದೇ ಅಡಚಣೆ ಇಲ್ಲ ಎಂಬ ವೈದ್ಯರ ಪ್ರಮಾಣಪತ್ರವೊಂದನ್ನು ತರಬೇಕಾಗುತ್ತದೆ.
ಸಂಬಂಧಿಸಿದವರು ಹೆಚ್ಚಿನ ಮಾಹಿತಿಗಾಗಿ : 0821-2472102 ಅಥವಾ 9945216163 ಸಂಖ್ಯೆಗೆ ಸಂಪರ್ಕಿಸಬಹುದು.
ಸಾರ್ವಜನಿಕರು ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ಆಯೋಜಕರ ಕೋರಿಕೆ.