September 9, 2025
sathvikanudi - ch tech giant

ಕುಂಸಿ   ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ  ವ್ಯಕ್ತಿಯ ಬಂಧನ….!

Spread the love

ಶಿವಮೊಗ್ಗ :

ತಾಲೂಕಿನ ಕುಂಸಿ ವ್ಯಾಪ್ತಿಯಲ್ಲಿ . 25.10.2024ರಂದು, ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಸುರೇಶ್ ಡಿ ವೈ ಎಸ್ ಪಿ ಉಪ ವಿಭಾಗ (ಬಿ) ಶಿವಮೊಗ್ಗ   ರವರ ಮಾರ್ಗದರ್ಶನದ ಮೇರೆಗೆ ಕುಂಸಿ ಠಾಣೆಯ ಇನ್ಸ್ಪೆಕ್ಟರ್ ದೀಪಕ್ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ.

ಪಿಎಸ್ಐ ಶಾಂತರಾಜ್ ಮತ್ತು ಸಿಬ್ಬಂದಿಗಳಾದ ಶಶಿಧರ್ ನಾಯಕ್, ಪ್ರಶಾಂತ್ ನಾಯಕ್, ರಘು, ಪ್ರಕಾಶ್, ಆದರ್ಶ್, ಶಾಹಿದ್, ಶಶಿಕುಮಾರ್ ರವರು ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದರು.

ಈ ಕಾರ್ಯಾಚರಣೆಯು ಆಯನೂರು ಹಾರ್ನಳ್ಳಿ ಮುಖ್ಯ ರಸ್ತೆಯ ನಾಗರಬಾವಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಚಂದ್ರ ನಾಯಕ (50) ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಚಂದ್ರ ನಾಯಕನ ಬಳಿ ಸುಮಾರು 640 ಗ್ರಾಂ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ , ಇದರ ಮೌಲ್ಯ ಸುಮಾರು 15,000 ರೂ. ಎಂದು ಅಂದಾಜಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು  ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

WhatsApp Image 2025-06-21 at 19.57.59
Trending Now