
ಕೊಂಡಜ್ಜಿ ಗ್ರಾಮ ಪಂಚಾಯ್ತಿಯ ಸದಸ್ಯ ಜೀವನ್ ಗೌಡ ಅವರು ಕೇರಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಅವರಿಗೆ ಕೇರಳದಲ್ಲಿ ತಮ್ಮ ಕುಟುಂಬದೊಂದಿಗೆ ಪ್ರವಾಸ ಕೈಗೊಂಡಿದ್ದರು. ಅವರು ಪ್ರಯಾಣಿಸುತ್ತಿದ್ದ ಟಿಟಿ ವಾಹನ ರಸ್ತೆ ಪಕ್ಕದ ಮನೆಯೊಂದಕ್ಕೆ ಡಿಕ್ಕಿಹೊಡೆದ ಪರಿಣಾಮವಾಗಿ ಬೀಕರ ಅಪಘಾತ ಸಂಭವಿಸಿತು.
ಅಪಘಾತದಲ್ಲಿ ಜೀವನ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುಃಖಕರ ಸುದ್ದಿ ಗ್ರಾಮದಲ್ಲಿ ಜನತೆಗೆ ಆಘಾತ ಉಂಟುಮಾಡಿದ್ದು, ಗ್ರಾಮಸ್ಥರು ಅಗಲಿದ ಜೀವನ್ ಗೌಡರ ಕುಟುಂಬದೊಂದಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.