
ತುರುವೇಕೆರೆ, ಪಟ್ಟಣದ ರಾಮಮಂದಿರ ರಸ್ತೆ, ಬ್ರಾಹ್ಮಣರ ಬೀದಿ, ಎನ್ ಎಚ್ ಪಿ ಎಸ್ ಶಾಲೆ ಬಳಿ ಇರುವ ಮನೆಯಲ್ಲಿ ಕಮಲಮ್ಮ (75) ಟಿ ಎನ್ ರಘು (55) ವರ್ಷದ ತಾಯಿ ಮತ್ತು ಮಗ ಅನಾರೋಗ್ಯಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದು, ಮೃತ ಟಿ ಎನ್ ರಘು ತುರುವೇಕೆರೆ ತಾಲೂಕಿನ ಗೋಣಿ ತುಮಕೂರು ಗ್ರಾಮದ ಶ್ರೀ ರಾಮಾಂಜನೇಯ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ, ಸ್ಥಳಕ್ಕೆ ತುರುವೇಕೆರೆ ಪೊಲೀಸ್ ಉಪ ನಿರೀಕ್ಷಕರಾದ ಕೃಷ್ಣಕುಮಾರ್ ಧಾವಿಸಿ ಪರಿಶೀಲನೆ ನಡೆಸಿ ಮೃತರ ಶವಗಳನ್ನು ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಅಜಿತ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ನಂತರ ಕುಟುಂಬಸ್ಥರು ಬ್ರಾಹ್ಮಣ ಸಮಾಜದ ವಿಧಿ ವಿಧಾನಗಳೊಂದಿಗೆ ಬಾಣಸಂದ್ರ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಸಿದ್ದು, ಮೃತರಿಗೆ ತಾಲೂಕು ಬ್ರಾಹ್ಮಣ ಸಮಾಜ, ಮತ್ತು ಶ್ರೀ ರಾಮಾಂಜನೇಯ ಪ್ರೌಢಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಮತ್ತು ಕುಟುಂಬಸ್ಥರು ಸಂತಾಪ ಸೂಚಿಸಿದ್ದಾರೆ, ಮೃತರು, ಸಹೋದರ, ಸೊಸೆ, ಮೊಮ್ಮಗ, ಬಂದು ಮಿತ್ರರನ್ನು ಅಗಲಿದ್ದು, ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:✍🏻 ಮಂಜುನಾಥ್ ಕೆ ಎ ತುರುವೇಕೆರೆ.ತುಮಕೂರು ಜಿಲ್ಲೆ