September 9, 2025
sathvikanudi - ch tech giant

ಮೊಬೈಲ್ ನೋಡಬೇಡ ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ವಿಷ   ಸೇವಿಸಿದ ವಿದ್ಯಾರ್ಥಿನಿ….!?

Spread the love



ಶಿವಮೊಗ್ಗ:

ತಾಯಿಯ ಸಲಹೆ ಮನಸ್ಸಿಗೆ ಬಿದ್ದಿದ್ದರಿಂದ ಮನನೊಂದು ವಿಷ ಸೇವಿಸಿದ್ದ ಪದವಿ ವಿದ್ಯಾರ್ಥಿನಿ ಧನುಶ್ರೀ (20) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾರನಹಳ್ಳಿಯ ನಿವಾಸಿಯಾದ ಧನುಶ್ರೀ, ಮೊಬೈಲ್ ಬಳಸುವ ವಿಚಾರಕ್ಕೆ ತಾಯಿ ಬುದ್ದಿ ಹೇಳಿದ್ದಕ್ಕೆ ಕಳೆನಾಶಕ ಸೇವಿಸಿದ ಧನುಶ್ರೀ….

ಘಟನೆ ನಡೆದ ಬಳಿಕ ಅವರನ್ನು ತಕ್ಷಣ ಆಯನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮೂರು ದಿನಗಳ ಚಿಕಿತ್ಸೆಯ ನಂತರ, ಧನುಶ್ರೀ ಇಂದು ಕೊನೆಯುಸಿರೆಳೆದಿದ್ದಾರೆ.

ಈ ಘಟನೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ, ಟಿವಿ ನೋಡಬೇಡ ಎಂಬ ಅಜ್ಜಿಯ ಸಲಹೆಗಳಿಗೆ ಬೇಸತ್ತು 16 ವರ್ಷದ ಬಾಲಕಿಯೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಮಾಜಿಕ ಮಾಧ್ಯಮದ ಪರಿಣಾಮಗಳು ಮತ್ತು ಮನೋಶಕ್ತಿ ಕಿಂಚಿತ್ತೂ ಕುಂದುತ್ತಿರುವ ಯುವ ಸಮೂಹದ ಸ್ಥಿತಿ ಚಿಂತಾಜನಕವಾಗಿದೆ.

WhatsApp Image 2025-06-21 at 19.57.59
Trending Now