
ಗುಬ್ಬಿ ತಾಲೂಕಿನ ಇರಕ ಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣ್ಣೆ ಮಾರಿ ಕಾವಲ್ ಬಳಿ ಹೆಚ್ಚಿನ ಮಳೆ ಬಿದ್ದ ಪರಿಣಾಮ ಮನೆಗಳಿಗೆ ನೀರು ನುಗ್ಗುವ ಪರಿಸ್ಥಿತಿ ಉಂಟಾಯಿತು.
ಈ ತೀವ್ರ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯ ಶಾಸಕ ಎಸ್. ಆರ್. ಶ್ರೀನಿವಾಸ್ ಹಾಗೂ ತಾಲೂಕು ನಿರ್ವಾಹಕ ಅಧಿಕಾರಿ ಪರಮೇಶ್ ಕುಮಾರ್, ಮಳೆಯ ನಡುವೆಯೇ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಯಂತ್ರವನ್ನು ಬಳಸಿ ಸಮಸ್ಯೆಯನ್ನು ತ್ವರಿತವಾಗಿ ನಿವಾರಣೆ ಮಾಡಿದರು.
ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಶಾಸಕರು ಮತ್ತು ಅಧಿಕಾರಿಗಳ ತಂದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯದಿಂದ ಮಣ್ಣು ಮಾರಿ ಕಾವಲ್ ಭಾಗದ ಜನತೆಗೆ ಹೆಚ್ಚಿನ ರೀತಿಯಲ್ಲಿ ಸಹಾಯವಾಗಿದ್ದು. ಮಳೆಯಲ್ಲಿ ಬಿದ್ದ ನೀರನ್ನು ತಕ್ಷಣವೇ ಹರಿದುಹೋಗುವಂತೆ ಕ್ರಮ ಕೈಗೊಂಡ ಶಾಸಕರ ಈ ಕಾರ್ಯವು ಸ್ಥಳೀಯರಿಗೆ ಭರವಸೆ ತುಂಬಿದಂತಾಯಿತು.