September 9, 2025
sathvikanudi - ch tech giant

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ: ಜಮೀನು ಪೌತಿ ಖಾತೆಗಾಗಿ 25,000 ರೂ. ಲಂಚ ಪಡೆಯಲು ಪ್ರಯತ್ನಿಸಿದಾಗ ದಾಳಿ..!

Spread the love



ಶಿವಮೊಗ್ಗ ಜಿಲ್ಲೆಯ ಹೊಳೆ ಅಂಚೆ ಅಗಸವಳ್ಳಿ ಹೊಸೂರು ನಿವಾಸಿ ಮುನಿರಂಗೇಗೌಡ.ಎನ್., ತಮ್ಮ ತಾತ ಶ್ರೀ ರಂಗಪ್ಪ ಬಿನ್ ಲೇಟ್ ಕರಿಗುಡ್ಡೆಗೌಡ ಅವರ ಮರಣದ ನಂತರ, ಅವರ 2 ಎಕರೆ ಜಮೀನು ಅಜ್ಜಿ ಶ್ರೀಮತಿ ರಂಗಮ್ಮ ಅವರ ಹೆಸರಿಗೆ ಪೌತಿ ಖಾತೆ ಮಾಡಿಸಲು, ಶಿವಮೊಗ್ಗ ತಾಲ್ಲೂಕು ಕಸಬಾ-1 ಹೋಬಳಿ, ಅಗಸವಳ್ಳಿ ಗ್ರಾಮದಲ್ಲಿರುವ ತಮ್ಮ ಆಸ್ತಿಯ ಸಂಬಂಧ ಅರ್ಜಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ, ಕಸಬಾ-1 ರ ಗ್ರಾಮ ಲೆಕ್ಕಾಧಿಕಾರಿ ಶ್ರೀ ಸಂಜಯ್ ಮೋಹಿತೆ ಎಸ್.ಆರ್. ಅವರು, ಪೌತಿ ಖಾತೆ ಮಾಡಿಕೊಡಲು 25,000 ರೂ. ಲಂಚದ ಬೇಡಿಕೆ ಇಟ್ಟರು. ಮುನಿರಂಗೇಗೌಡ ಈ ಬೇಡಿಕೆಯನ್ನು ಮೊಬೈಲ್‌ನಲ್ಲಿ ಧ್ವನಿಮುದ್ರಿಸಿ, ಲೋಕಾಯುಕ್ತ ಠಾಣೆಗೆ ದೂರು ನೀಡಿದರು.

ಇಂದು ಸಂಜೆ 5:15ರ ಸಮಯದಲ್ಲಿ, ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿರುವ ಗ್ರಾಮ ಆಡಳಿತ ಕಚೇರಿಯಲ್ಲಿ, ಗ್ರಾಮ ಲೆಕ್ಕಾಧಿಕಾರಿ ಲಂಚದ ಹಣ ಸ್ವೀಕರಿಸುತ್ತಿರುವ ವೇಳೆ, ಲೋಕಾಯುಕ್ತ ಪೊಲೀಸ್ ತಂಡ ದಾಳಿ ನಡೆಸಿತು. ಈ ದಾಳಿಯಲ್ಲಿ, ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಅಪರಾಧಿ ಸರ್ಕಾರಿ ನೌಕರನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ.

ಈ ಕಾರ್ಯಾಚರಣೆಯ ನೇತೃತ್ವವನ್ನು ಲೋಕಾಯುಕ್ತ ಎಸ್ಪಿ ಮಂಜುನಾಥ ಚೌದರಿ ಎಂ.ಎಚ್. ಅವರ ನೇತೃತ್ವದಲ್ಲಿ . ಕರ್ತವ್ಯ ನಿರ್ವಹಿಸಿದ ತಂಡದಲ್ಲಿ ಇನ್ಸ್‌ಪೆಕ್ಟರ್ ಶ್ರೀ ಹೆಚ್.ಎಸ್. ಸುರೇಶ್, ಮತ್ತು ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, ಸುರೇಂದ್ರ, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್.ದೇವರಾಜ್, ಪುಟ್ಟಮ್ಮ, ಗಂಗಾಧರ, ಪ್ರದೀಪ್, ಜಯಂತ್ ಮತ್ತು ತರುಣ್ ಕುಮಾರ್ ಅವರು ಪಾಲ್ಗೊಂಡಿದ್ದರು…

WhatsApp Image 2025-06-21 at 19.57.59
Trending Now