September 10, 2025
sathvikanudi - ch tech giant

ಗ್ರಾಮ ಪಂಚಾಯಿತಿ PDO ಲಂಚದ ಪ್ರಕರಣ: ಲೋಕಾಯುಕ್ತ ಬಲೆಗೆ ಮಹಮದ್ ಆಲಿ ಮತ್ತು ಸುರೇಶ್ ನಾಯಕ್…!?

Spread the love

ಶಿವಮೊಗ್ಗ ಜಿಲ್ಲೆಯ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಲಂಚದ ದಂಧೆ ಬೆಳಕಿಗೆ ಬಂದಿದ್ದು, PDO (ಪಂಚಾಯತ್ ಡೆವಲಪ್ಮೆಂಟ್ ಆಫೀಸರ್) ಮಹಮದ್ ಆಲಿ ಮತ್ತು ಗ್ರಾಮ ಪಂಚಾಯಿತಿ ಸೆಕ್ರೆಟರಿ ಸುರೇಶ್ ನಾಯಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹಮದ್ ಆಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಲುಪಿಸದೇ, ಅದಕ್ಕಾಗಿ ಹಣದ ಬೇಡಿಕೆ ಇಟ್ಟಿರುವ ಆರೋಪಕ್ಕೆ ಗುರಿಯಾಗಿದ್ದಾರೆ.



ಸಾರ್ವಜನಿಕರ ಆಕ್ರೋಶ: ಗ್ರಾಮಸ್ಥರು ನೀಡಿದ ಮಾಹಿತಿಯ ಪ್ರಕಾರ, ಕೊರಗಲು lone (ಕೋಟ್ಟಿಗೆ lone) ಅನುಮೋದನೆ ಪಡೆಯಲು ರೈತರು ಅರ್ಜಿ ಸಲ್ಲಿಸಿದ್ದರೂ, ಮೂರು ತಿಂಗಳು ಕಳೆದರೂ ಅಗತ್ಯ ದಾಖಲೆಗಳನ್ನು ನೀಡಲು ವಿಳಂಬ ಮಾಡಲಾಗಿತ್ತು. ಇ-ಸೊತ್ತು ಪ್ರಕ್ರಿಯೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ₹10,000 ಲಂಚ ಪಡೆಯುವ ಹಗರಣದ ಮಾಹಿತಿ ಹೊರಬಿದ್ದಿದೆ. ಈ ಕಾರಣದಿಂದ ಗ್ರಾಮಸ್ಥರು ಬೇಸತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.

ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆ: ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ, ಹಣ ಪಡೆಯುವ ಸಂದರ್ಭದಲ್ಲೇ PDO ಮಹಮದ್ ಆಲಿ ಮತ್ತು ಸೆಕ್ರೆಟರಿ ಸುರೇಶ್ ನಾಯಕ್ ಅವರನ್ನು ದಸ್ತಗಿರಿ ಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಲೋಕಾಯುಕ್ತ ತನಿಖೆ ಮುಂದುವರೆದ ಬಳಿಕ ಬಹಿರಂಗವಾಗಲಿದೆ.

ಸರ್ಕಾರದ ಸೌಲಭ್ಯಗಳನ್ನು ಲಂಚಕ್ಕಾಗಿ ಅಡ್ಡಿಪಡಿಸುವ ಈ ಕೃತ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣ ಗ್ರಾಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಅಧಿಕಾರಿಗಳ ಲಂಚದ ಬೇಡಿಕೆ ಎದುರಿಸುತ್ತಿರುವ ರೈತರು ಹಾಗೂ ಸಾರ್ವಜನಿಕರು ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ.



ಈ ಘಟನೆಯು ಗ್ರಾಮದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದು, ಸಾರ್ವಜನಿಕರು ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ನಡೆಯುವ ತನಿಖೆಯ ವರದಿ ನಿರೀಕ್ಷಿಸಲಾಗಿದೆ.

WhatsApp Image 2025-06-21 at 19.57.59
Trending Now