September 10, 2025
sathvikanudi - ch tech giant

ಜಾತಿಯ ಮೌಢ್ಯಕ್ಕೆ ಬಳಿಯಾದ ಕವಿನ್! ದಲಿತನಾಗಿ ಹುಟ್ಟಿದ್ದೇ ಅಪರಾಧವೆ?

Spread the love

ಶುಭಾಷಿನಿ. ಕವಿನ್.

ತಮಿಳುನಾಡು:

ತಿರುನೇಲ್ವೆಲಿ ಜಿಲ್ಲೆಯ ಕವಿನ್ ಎಂಬ ಯುವಕನನ್ನು ಕೇವಲ “ದಲಿತ” ಎಂಬ ಮುದ್ರೆ ಹೊತ್ತಿರುವ ಕಾರಣಕ್ಕೆ, ಪ್ರೀತಿಯ ಹೆಸರಿನಲ್ಲಿ ಕ್ರೂರವಾಗಿ ಕೊಲೆಯಾಗಿದ್ದಾನೆ. ಈ ಘಟನೆ ಪ್ರೇಮಹತ್ಯೆಯಂತೆ ಕಾಣಬಹುದಾದರೂ, ಅದರ ಹೀನಕುಹೀನ ಸತ್ಯವೇನೆಂದರೆ – ಇದು ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಭಾವಿಗಳ ದೌರ್ಜನ್ಯದ ಕೊಲೆ.

ಶುಭಾಷಿನಿ ಪೋಷಕರು.



ಕವಿನ್ ಒಬ್ಬ ವಿದ್ಯಾವಂತ ಯುವಕ – ಗಾಲ್ಡ್ ಮೆಡಲಿಸ್ಟ್, ಐಟಿ ಉದ್ಯೋಗಿ, ಸಾಮಾಜಿಕವಾಗಿ ಬದಲಾಗುತ್ತಿರುವ ಹೊಸ ಪೀಳಿಗೆಯ ಯುವಕ. ಆದರೆ ಪ್ರೀತಿಸಿ ಆರಿಸಿಕೊಂಡ ಯುವತಿ ಶುಭಾಷಿನಿ ಪೊಲೀಸ್ ಅಧಿಕಾರಿಗಳ ಪುತ್ರಿ, ಮೇಲ್ಜಾತಿಗೆ ಸೇರಿದವಳು ಎಂಬ ಅಷ್ಟೇ ಕಾರಣಕ್ಕೆ, ಅವನ ಪ್ರೀತಿ  ಅಪರಾಧವಾಗಿ ತಿರುಗಿತ್ತು.

ಸುಜಿತ್, ಯುವತಿಯ ಸಹೋದರ, ಕವಿನ್ ಅನ್ನು ಬರ್ಬರವಾಗಿ ಮಚ್ಚಿನಿಂದ ಕೊಂದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಅವನ ತಂದೆ ತಾಯಿ ಪೊಲೀಸ್ ಅಧಿಕಾರಿಗಳು ಅನ್ನುವ ಧೈರ್ಯ ನಾವೂ ಮೇಲ್ ಜಾತಿಯವರು ಅನ್ನುವ ಅಹಂಕಾರದಿಂದ ದಲಿತ ಯುವಕನ ಕೊಲೆ.

ಆರೋಪಿ ಸುರ್ಜಿತ್.



“ಇದು ಕೇವಲ ಕ್ರೋಧವೋ? ಅಥವಾ ಪೊಲೀಸ್ ಅಧಿಕಾರಿಗಳ ‘ಮೇಲ್ಮನಸ್ಸು’ ಮತ್ತು ಜಾತಿ ಗರ್ವದ ದುರ್ಬಳಕೆವೋ? ನನ್ನ ಮಗನು ದಲಿತನಾಗಿದ್ದಕ್ಕೆ ಅವನ ಜೀವದ ಬೆಲೆ ಇಷ್ಟು ಕಡಿಮೆನಾ?” ಎಂದು ಕವಿನ್ ತಂದೆಯ ಕಣ್ಣೀರಿನ ಭಾವನೆ.


ಇಲ್ಲಿ ತಂದೆಯ ಆಕ್ರೋಶ ಕೇವಲ ಮಗನಿಗೆ ನ್ಯಾಯ ಬೇಕೆಂಬ ಯಾಚನೆ ಅಲ್ಲ – ಅದು ಜಾತಿ ಕ್ರೌರ್ಯ ವಿರುದ್ಧದ ಜನರ ಹೋರಾಟದ ಹಕ್ಕು,ಸಮಾಜದ ಮೂಢಮತದ ವಿರುದ್ಧ ಏಳುವ ಮೌನದ ಹಲ್ಲೆ.

ಒಬ್ಬನು ಪ್ರೀತಿಸಿದರೆ ಅವನನ್ನು ಕೊಲ್ಲುವುದು ನ್ಯಾಯವೇ? ಹಾಗಾದರೆ ಇಬ್ಬರೂ ಪ್ರೀತಿಸಿದ್ದರೆ ಇಬ್ಬರನ್ನೂ ಕೊಲ್ಲಬೇಕಿತ್ತು. ಆದರೆ ಇಲ್ಲಿದೆ ‘ಜಾತಿ ಪಕ್ಷಪಾತ’ – ಹುಡುಗನಿಗೆ ಮರಣದಂಡನೆ.! ಹುಡುಗಿಗೆ ರಾಜಕೀಯ ರಕ್ಷಣೆ..!

ದಲಿತರ ಮೇಲೆ ನಡೆಯುತ್ತಿರವ ದೌರ್ಜನ್ಯವಾಗಿದೆ ಅಪರಾಧಿಗಳು ಯಾರು ಆಗಿರಲಿ, ಅವರನ್ನು ಕಾಪಾಡಿಕೊಳ್ಳುವುದು ಸಮಾಜದ ಮೇಲೆ ದೊಡ್ಡ ಅಪರಾಧ. ಪೊಲೀಸ್ ಅಧಿಕಾರಿಗಳ ಕುಟುಂಬದಲ್ಲಿ ಹುಟ್ಟಿದವರೆಂದು ನಡವಳಿಕೆಗೆ ನಿರ್ಬಂಧವಿಲ್ಲ. ಅವರ ಜಾತಿಗೆ ಬೆಂಬಲವಿಲ್ಲ. ಕಾನೂನಿಗೆ ಎಲ್ಲರೂ ಸಮಾನರು ಎಂಬ ಆಧಾರವೇ ಇಲ್ಲದಿರಲಿ, ನ್ಯಾಯ ಎಂದರೆ ಇದೇನು?

ಕವಿನ್ ತಂದೆ ಎಚ್ಚರಿಸುತ್ತಾರೆ –

“ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಆದರೆ ಈ ದೇಶದ ದಲಿತರು ತಮ್ಮ ಜೀವದ ಹಕ್ಕುನ್ನು ಕಳೆದುಕೊಳ್ಳದಂತೆ ಈ ನ್ಯಾಯಾಂಗ ವ್ಯವಸ್ಥೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು.”

ಕವಿನ್ ಕೊಲೆ ಮಾಡಿದ ತಪ್ಪಿತಸ್ತರು ಯಾವ ಜಾತಿ, ಧರ್ಮ, ರಾಜಕೀಯ ಪ್ರಭಾವಿಗಳು, ಯಾವುದೇ ಅಧಿಕಾರಿಯಾಗಿದ್ದರು ಕೂಡ ಎಲ್ಲರಿಗೂ ಕಾನೂನು ಒಂದೇ ಅವರಿಗೆ ತಕ್ಕ ಶಿಕ್ಷೆ ಕೊಟ್ಟು ಸಮಾಜಕ್ಕೆ ಉದಾಹರಣೆಯಾಗಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ✍🏻✍🏻✍🏻

ಸತೀಶ್ ಮುಂಚೆಮನೆ ಸಾರಥ್ಯದಲ್ಲಿ… ಬಿಗ್ ಲೈವ್ ಸುದ್ದಿ ಕ್ಷಣ ಕ್ಷಣದ ಸುದ್ದಿ ಇನ್ನಷ್ಟು ಸುದ್ದಿ ಓದಲು ಸಾತ್ವಿಕ ನುಡಿ ಮಾಸಪತ್ರಿಕೆಯ web new spage ನೋಡಿ. ಸುದ್ದಿ ಜಾಹಿರಾತುಗಳಿಗಾಗಿ ಕರೆಮಾಡಿ.

9845905838.ವಿಜಯ್ ಮುನಿಯಪ್ಪ
ಕ್ರೈಂ ವರದಿಗಾರರು.





.

WhatsApp Image 2025-06-21 at 19.57.59
Trending Now