
ಆಲೂರು : ಹಾಸನ ಜಿಲ್ಲೆ ಆಲೂರು ತಾಲೂಕಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆಸುತ್ತಿರುವ 1964ನೇ ಮಧ್ಯ ವರ್ಜನ ಶಿಬಿರವನ್ನು ಯಶಸ್ವಿಯಾಗಿ 5ನೇ ದಿನವನ್ನು ಕೂಡ ಮುಗಿಸಲಾಯಿತು.
ಈ ಶಿಬಿರದಲ್ಲಿ ಮಧ್ಯವಸಮದಿಂದ ಹಾಳಾಗುತ್ತಿದ್ದ ಯುವಜನತೆಗೆ ಮಾರ್ಗದರ್ಶನನ್ನು ತೋರಿಸುವ ದೂರಮಾಡುವ ದೃಷ್ಟಿಯಿಂದ ಅವರಿಗೆ ಯೋಗ ಜ್ಞಾನ ಆಟೋಟ ಮತ್ತು ಜೊತೆಗೆ ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡಿ ಅವರ ಮನಪರಿವರ್ತನೆ ಮಾಡುವ ಕೆಲಸವನ್ನು ಕೂಡ ಮಾಡಲಾಯಿತು.
ಈ ಶಿಬಿರವು ಎಂಟು ದಿನಗಳ ಶಿಬಿರವಾಗಿದ್ದು ಈಗಾಗಲೇ ಐದು ದಿನಗಳನ್ನು ಸಂಪೂರ್ಣ ಮುಗಿಸಿದ್ದು ಇನ್ನು ಕೇವಲ ಮೂರು ದಿವಸಗಳಿದ್ದು ಕೊನೆಯ ದಿವಸ ಸಮಾರೋಪ ಸಮಾರಂಭವನ್ನು ಕೂಡ ಮಾಡಲಾಗುತ್ತದೆ ಎಂದು ತಿಳಿಸಿ ಶಿಬಿರದ ಮೇಲ್ವಿಚಾರಕರಾದ ದೇವಿ ಪ್ರಸಾದ್ ಸುವರ್ಣ ರವರು ಮಾತನಾಡಿ ಶಿಬಿರದ ಉದ್ದೇಶ ಮತ್ತು ಅದರ ಆಗುಹೋಗುಗಳ ಬಗ್ಗೆ ತಿಳಿಸಿದರು.