September 10, 2025
sathvikanudi - ch tech giant

ಓಮ್ನಿ ಹಾಗೂ ಟಾಟಾ ಕಾರಿನ ನಡುವೆ ಡಿಕ್ಕಿ

Spread the love

ಬೆಳ್ಳಂಬೆಳಿಗ್ಗೆ ಆನಂದಪುರ ಬಳಿ ರಸ್ತೆ ಓಮ್ನಿ ಹಾಗೂ ಟಾಟಾ ಕಾರಿನ ನಡುವೆ ಡಿಕ್ಕಿ ಉಂಟಾಗಿದ್ದು, ಅಪಘಾತದಲ್ಲಿ ಯುವಕನೋರ್ವ ಅಸುನೀಗಿದ್ದಾನೆ.

ಜೋಗದಿಂದ ಶಿವಮೊಗ್ಗ ಕಡೆ ಓಮ್ನಿ ಕಾರು ಬರುತ್ತಿದ್ದ ವೇಳೆ, ಸಾಗರ ಕಡೆ ಹೊರಟಿದ್ದ ಕೆಂಪು ಕಲರ್‌ನ ಟಾಟಾ ಕಂಪನಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅಜಯ್ ಎಂಬ 21 ವರ್ಷದ ಯುವಕ ಅಸುನೀಗಿದ್ದಾನೆ.

ಓಮ್ನಿ ಕಾರಿನಲ್ಲಿ ಇಬ್ಬರು ಹಾಗೂ ಟಾಟಾ ಕಂಪನಿಯ ಕಾರಿನಲ್ಲಿ ಓರ್ವ ಇದ್ದು, ಮೂವರಲ್ಲಿ ಓರ್ವ ಅಸುನೀಗಿದ್ದಾನೆ. ಓಮ್ನಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಗಾಯಾಳು ಇಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಮೂವರು ಯಾವ ಊರಿನವರು ಎಂಬುದು ತಿಳಿದು ಬರಬೇಕಿದೆ. ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿದ್ದಾರೆ.

WhatsApp Image 2025-06-21 at 19.57.59
Trending Now