September 9, 2025
sathvikanudi - ch tech giant

ಲೋಕಾಯುಕ್ತ ದಾಳಿಗೆ ಬಲಿಯಾದ ಭ್ರಷ್ಟ ಬೆಸ್ಕಾಂ ಸಹಾಯಕ ಅಭಿಯಂತರ.!?

Spread the love



ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ವಿರುದ್ಧ ತೀವ್ರ ಕಾರ್ಯಾಚರಣೆ ಮುಂದುವರಿಸುತ್ತಿದ್ದು, ಬೆಂಗಳೂರು ನಗರ ಎಚ್.ಎ.ಎಲ್. ಎಸ್-17 ಉಪವಿಭಾಗದ ಬಸವನಗರ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಅಭಿಯಂತರ ಯೋಗರಾಜ್ ಅವರನ್ನು ಲಂಚ ಸ್ವೀಕರಿಸುವ ವೇಳೆ ಬಂಧಿಸಿದ್ದಾರೆ.

ನಿನ್ನೆ (15.01.2025) ಸಂಜೆ 4 ಗಂಟೆ ವೇಳೆಗೆ 3 ಲಕ್ಷ ಲಂಚದ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿ ಯೋಗರಾಜ್ ಅವರನ್ನು ಸೆರೆ ಹಿಡಿದರು. ಮಲ್ಲೇಶಪಾಳ್ಯ ಪ್ರದೇಶದಲ್ಲಿ 5300 ಚದರ ಅಡಿ ವಿಸ್ತೀರ್ಣದ ಕಟ್ಟಡಕ್ಕೆ ಅಂದಾಜು ಪಟ್ಟಿ ಮಾಡಲು, ಹೆಚ್ಚುವರಿ 150 ಚದರ ಅಡಿ ವಿಸ್ತೀರ್ಣ ತೋರಿಸಿ ಲಂಚದ ಬೇಡಿಕೆ ಇಟ್ಟಿದ್ದರು.

ಗ್ರಾಹಕರು ಮತ್ತು ಗುತ್ತಿಗೆದಾರರಿಗೆ ಪರವಾನಿಗೆ ಸಂಬಂಧಿಸಿದ ಅಸಮಾನತೆಗಳನ್ನು ಉಲ್ಲೇಖಿಸಿ ಯೋಗರಾಜ್ 3 ಲಕ್ಷ ಲಂಚದ ಹಣವನ್ನು ವ್ಯಾನ್ ಚಾಲಕನ ಮೂಲಕ ಪಡೆಯಲು ಸಂಚು ರೂಪಿಸಿದ್ದರು. ಆದರೆ ಲೋಕಾಯುಕ್ತ ಅಧಿಕಾರಿಗಳು ಈ ಯೋಜನೆಗೆ ಬ್ರೇಕ್ ಹಾಕಿ, ಆಸ್ತಿ ಪರಿಶೀಲನೆಗೆ ತಕ್ಷಣ ದಾಳಿ ನಡೆಸಿ ಹಣದೊಂದಿಗೆ ಯೋಗರಾಜ್ ಅವರನ್ನು ಹಿಡಿದರು.

ಇದು ಕಳೆದ ವಾರ ಲೋಕಾಯುಕ್ತರು ಬೆಸ್ಕಾಂ ಕಚೇರಿಗಳಲ್ಲಿ ನಡೆಸಿದ ತಪಾಸಣೆಯ ನಂತರದ ಪ್ರಮುಖ ಕಾರ್ಯಾಚರಣೆ ಆಗಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ತೀವ್ರ ಎಚ್ಚರಿಕೆಯ ಸಂದೇಶ ನೀಡಿದೆ.

WhatsApp Image 2025-06-21 at 19.57.59
Trending Now