September 10, 2025
sathvikanudi - ch tech giant

ಕಂದಾಯ ಇಲಾಖೆಯ ಆರ್‌ಐ ಮಂಜುನಾಥ್ ಮತ್ತು ಸರ್ವೆ ಇಲಾಖೆ ಎಡಿಎಲ್‌ಆರ್ ಅಶ್ವಿನಿ ಲೋಕಾಯುಕ್ತ ಬಲೆಗೆ

Spread the love

ಕೋಲಾರ :

ಮಾಲೂರು: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಭೂ ಪರಿವರ್ತನೆ ಮಾಡಿಕೊಡಲು ₹20 ಸಾವಿರ ಲಂಚ ಪಡೆಯುತ್ತಿದ್ದ ಕಂದಾಯ ಮತ್ತು ಸರ್ವೆ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತರು ಬಂಧಿಸಿದ್ದಾರೆ.

ಮಂಜುನಾಥ್ ಶನಿವಾರ ಬೆಳಗ್ಗೆ ₹10 ಸಾವಿರ ಪಡೆದು ಇನ್ನುಳಿದ ಹಣವನ್ನು ಅಟೆಂಡರ್‌ಗೆ ನೀಡುವಂತೆ ತಿಳಿಸಿದ್ದಾರೆ. ಅಟೆಂಡರ್‌ನಿಂದ ಮಂಜುನಾಥ್ ಹಣ ಪಡೆಯುವಾಗ ಲೋಕಾಯುಕ್ತ ಎಸ್.ಪಿ. ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಅವರನ್ನು ಬಂಧಿಸಿದರು.

ದೊಡ್ಡ ಕಡತೂರು ಗ್ರಾಮದ ಕಾಮಣ್ಣ ಎಂಬುವರ ಜಮೀನಿನ ನಕಾಶೆ ಮತ್ತು ಭೂ ಪರಿವರ್ತನೆಗಾಗಿ ಕಂದಾಯ ಇಲಾಖೆಯ ಆರ್‌ಐ ಮಂಜುನಾಥ್ ಮತ್ತು ಸರ್ವೆ ಇಲಾಖೆ ಎಡಿಎಲ್‌ಆರ್ ಅಶ್ವಿನಿ ಎಂಬುವವರು ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಅಪರಾಧದ ದೃಷ್ಟಿಯಿಂದ ಭ್ರಷ್ಟಾಚಾರ ನಿಗ್ರಹ ದಳವು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಈ ಘಟನೆ ಜನರಲ್ಲಿ ಕಂದಾಯ ಮತ್ತು ಸರ್ವೆ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಕಳವಳ ಉಂಟುಮಾಡಿದ್ದು, ಸರಕಾರವು ಇಂತಹ ಭ್ರಷ್ಟಾಚಾರವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

WhatsApp Image 2025-06-21 at 19.57.59
Trending Now