
ಬೆಂಗಳೂರು: ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರು ಸಂಘದ ರಾಜ್ಯ ಕಚೇರಿಯಲ್ಲಿ ಇಂದು ಮಹತ್ವಪೂರ್ಣ ಸಭೆ ನಡೆಯಿತು. ಈ ಸಭೆಯಲ್ಲಿ ಮೈಸೂರು ಜಿಲ್ಲಾ ಘಟಕವನ್ನು ಯಶಸ್ವಿಯಾಗಿ ನಿರ್ಮಿಸಿರುವ ಅಧ್ಯಕ್ಷ ಶಶಿಕಾಂತ್ ಶೆಟ್ಟಿಯವರನ್ನು ರಾಜ್ಯ ಮಟ್ಟದಲ್ಲಿ ಸನ್ಮಾನಿಸಲಾಯಿತು. ಅದರ ಜೊತೆಗೆ ಮೈಸೂರು ಘಟಕದ ಸದಸ್ಯರಿಗೆ ಅಧಿಕೃತ ಆದೇಶ ಪ್ರತಿಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಘಟಕದ ಸದಸ್ಯರಾದ ಸಂತೋಷ ನಿರ್ದೇಶಕರು, ನಾಗೇಂದ್ರ, ಲೋಕೇಶ್, ಅಭಿಲಾಶ, ಜಯಶಂಕರ್, ನಾಗೇಶ್, ಮಣಿಕಂಠ ನಂಜನಗೂಡು ಹಾಗೂ ರಾಜೇಶ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಇವರು ಸಂಘಟನೆಯ ಕ್ರಿಯಾಶೀಲತೆಗೆ ಕಾರಣವಾಗಿರುವ ಪ್ರಮುಖ ಸದಸ್ಯರಾಗಿದ್ದು, ಸಂಘಟನೆಯ ಬೆಳವಣಿಗೆಗೆ ತಮ್ಮದೇ ಆದ ಬೆಂಬಲ ನೀಡಿದ್ದಾರೆ.

ಇದನ್ನೇ ಅನುಸರಿಸಿ ತುರುವೇಕೆರೆ ತಾಲ್ಲೂಕಿನ ಉಪಾಧ್ಯಕ್ಷರಾದ ಪಾರ್ಥ ಸಾರಥಿ, ಮಂಜುನಾಥ್ ಹಾಗೂ ಧರಣೇಶ್ ಅವರಿಗೆ ಸಹ ಆದೇಶ ಪ್ರತಿ ನೀಡಲಾಯಿತು. ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಈ ಸಂದರ್ಭದಲ್ಲಿ ವಿಸ್ತೃತ ಚರ್ಚೆ ನಡೆಯಿತು. ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಎದುರಿಸುತ್ತಿರುವ , ಶೋಷಣೆ, ಮತ್ತು ಸಂಕಷ್ಟಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ಸಂಘಟನೆಯ ಉದ್ದೇಶಗಳು ಎಲ್ಲ ಸದಸ್ಯರಿಗೂ ಸ್ಪಷ್ಟವಾಗುವಂತೆ ಮಾಹಿತಿ ನೀಡಲಾಯಿತು. ಸಂಘಟನೆಯ ರೂಪರೇಖೆಗಳ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಸದಸ್ಯರಲ್ಲಿ ಸಂಘದ ಬೆಳವಣಿಗೆಗೆ ಪ್ರೋತ್ಸಾಹ ಹಾಗೂ ಭರವಸೆ ಮೂಡಿಸಲಾಯಿತು.
ಈ ಸಂದರ್ಭ ಸಂಘಟನೆಯ ರಾಜ್ಯಾಧ್ಯಕ್ಷರಾದ ಶಶಿಕಾಂತ್ ಆ ಕಾಂಬಳೆ, ಸಂಘಟನಾ ಸಂಚಾಲಕರಾದ ಶ್ರೀಮತಿ ಯಶಸ್ವಿನಿ, ಸಲಹಾ ಸಮಿತಿಯ ರಾಜ್ಯಾಧ್ಯಕ್ಷರಾದ ಸಂಜಯ್ ಸಾವಂತ್ ಮತ್ತು ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ವಿಜಯ್ ಮುನಿಯಪ್ಪ ಉಪಸ್ಥಿತರಿದ್ದರು.
ಈ ಸಭೆಯು ಸಂಘಟನೆಯ ಉದ್ದೇಶ ಹಾಗೂ ಗುರಿಗಳನ್ನು ಸ್ಪಷ್ಟಪಡಿಸಿದ ಒಂದು ಸ್ಫೂರ್ತಿದಾಯಕ ವೇದಿಕೆಯಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಸಂಘಟಿತ ಹೋರಾಟದ ದಿಕ್ಕಿನಲ್ಲಿ ನಡೆದು ಹೋಗುವ ಭರವಸೆ ನೀಡಿತು.
