September 9, 2025
sathvikanudi - ch tech giant

₹2000 ಸಾಲಕ್ಕಾಗಿ ಸ್ನೇಹಿತನ ಹತ್ಯೆ! “ಬ್ರೇಕಪ್ ಕೊಲೆ” ಪ್ರಕರಣಕ್ಕೆ ಹೊಸ ಟ್ವಿಸ್ಟ್!?

Spread the love



ಆನೇಕಲ್, ರಾಮನಗರ:
ಸುದ್ದಿಗೋಷ್ಠಿಗಳಲ್ಲಿ “ಬ್ರೇಕಪ್‌ ಕೊಲೆ” ಎಂದು ಚರ್ಚೆಯಲ್ಲಿದ್ದ ಪ್ರಕರಣ ಇದೀಗ ಹಣಕಾಸಿನ ವಿಚಾರವಾಗಿ ತಿರುವು ಪಡೆದುಕೊಂಡಿದೆ. ರಾಮನಗರ ಜಿಲ್ಲೆ ಆನೇಕಲ್‌ ಪಟ್ಟಣದ ಹೊರವಲಯದಲ್ಲಿ ನಡೆದ ಯುವಕ ರವಿ ಕುಮಾರ್ ಹತ್ಯೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಮೊದಲು ಇದು ಲವ್ ಬ್ರೇಕಪ್‌ನ ಪರಿಣಾಮ ಎಂಬ ನಿಲುವಿಗೆ ಅಧಿಕಾರಿಗಳು ತಲುಪಿದ್ದರು. ಆದರೆ ಈಗ ಆರೋಪಿಗಳಲ್ಲಿ ಒಬ್ಬನಾದ ಮನ್ಮಥನ ಆಡಿಯೋ ಕಾಫಿ ವೈರಲ್ ಆದ ಬೆನ್ನಲ್ಲೇ, ಈ ಹತ್ಯೆಯ ಹಿಂದಿನ ನಿಜ ಕಾರಣವಾಗಿ ಕೇವಲ ₹2000 ಸಾಲದ ವಿಚಾರವೇ ಇರುವುದಾಗಿ ತಿಳಿದುಬಂದಿದೆ.

ಘಟನೆ ಹಿನ್ನೆಲೆ:
25 ವರ್ಷದ ಯುವಕ ರವಿ ಕುಮಾರ್ ಇತ್ತೀಚೆಗೆ ಕೆಲಸದ ನಿಮಿತ್ತ ರಾಮನಗರದಿಂದ ಹೊರಡುತ್ತಿದ್ದೆನೆಂದು ಹೇಳಿ ಮನೆ ಬಿಟ್ಟಿದ್ದ. ಆದರೆ ಆಗಲೇ ಪ್ಲ್ಯಾನ್ ರೂಪಿಸಿದ್ದ ಮನ್ಮಥ, ಮನೀಷ್ ಹಾಗೂ ಮನೋಜ್‌ ಎಂಬವರು ಆತನನ್ನು ಆನೇಕಲ್ ಸಮೀಪಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲೇ ನಿರ್ಜನ ಪ್ರದೇಶದಲ್ಲಿ ಈ ಮೂವರು ಸೇರಿ ರವಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕೆಲ ನಿಮಿಷಗಳಲ್ಲಿ ನಡೆದ ಈ ದಾಳಿಯಲ್ಲಿ ರವಿಗೆ ತಪ್ಪಿಸಿಕೊಳ್ಳುವ ಅವಕಾಶವೂ ಸಿಗದೆ ಪ್ರಾಣ ಕಳೆದುಕೊಂಡಿದ್ದಾನೆ.

ಆಡಿಯೋ ವೈರಲ್: ಟ್ವಿಸ್ಟ್‌ಗೆ ಕಾರಣ:
ಪ್ರಮುಖ ಆರೋಪಿಯಾದ ಮನ್ಮಥ ತನ್ನ ಪರಿಚಿತರೊಬ್ಬರೊಂದಿಗೆ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅದರಲ್ಲಿ “₹2000 ಸಾಲದ ವಿಚಾರವನ್ನೇ ಬಗೆಹರಿಸಬೇಕಿತ್ತು” ಎಂಬ ಮಾತುಗಳು ಸ್ಪಷ್ಟವಾಗಿ ಕೇಳಿಬಂದಿವೆ. ಇದರಿಂದಾಗಿ ಕೊಲೆಗೆ ಲವ್ ಬ್ರೇಕಪ್ ಕಾರಣವಲ್ಲ ಎಂಬುದು ಬಹಿರಂಗವಾಗಿದೆ.

ಪೊಲೀಸ್ ತನಿಖೆ ಮುಂದುವರಿಕೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹಣದ ವಿಚಾರವೇ ಕೊಲೆಗೆ ಕಾರಣ ಎಂಬ ದೃಷ್ಟಿಕೋನದಿಂದ ಸಾಕ್ಷ್ಯಗಳ ಸಂಗ್ರಹ ನಡೆಯುತ್ತಿದೆ.

ಸಾಮಾಜಿಕ ಪ್ರತಿಕ್ರಿಯೆ:
ಇಷ್ಟೊಂದು ತೀವ್ರ ಕ್ರೂರತೆ ಕೇವಲ ₹2000 ಸಾಲದ ವಿಚಾರಕ್ಕಾಗಿ ಎಂಬುದು ಜನರಲ್ಲಿ ಆಘಾತ ಮೂಡಿಸಿದೆ. ಸ್ನೇಹಿತರ ಮೇಲೆ ವಿಶ್ವಾಸವಿಟ್ಟ ಯುವಕನಿಗೆ ತಾವು ನಂಬಿದ್ದವರಿಂದಲೇ ಜೀವ ಕಳೆದುಕೊಳ್ಳಬೇಕಾದ ಸ್ಥಿತಿಗೆ ಕಾರಣವಾದ ಘಟನೆ ಎಲ್ಲೆಡೆ ಆಕ್ರೋಶ ಮೂಡಿಸಿದೆ.

WhatsApp Image 2025-06-21 at 19.57.59
Trending Now