September 9, 2025
sathvikanudi - ch tech giant

ಕನಸಿನಲ್ಲಿ ಆಂಜನೇಯ ಪ್ರತ್ಯಕ್ಷ! ಕ್ರಿಶ್ಚಿಯನ್ ಧರ್ಮ ತ್ಯಜಿಸಿ ಹಿಂದೂ ಧರ್ಮಕ್ಕೆ ಮರಳಿದ ಕುಟುಂಬ

Spread the love



ಯಾದಗಿರಿ: ಧರ್ಮಾಂತರದ ನಡುವೆ ವೈಚಾರಿಕ ಹಿಂಜರಿತ ಕಂಡು, ಮತ್ತೆ ಮೂಲ ಧರ್ಮದತ್ತ ಒಲಿದಿರುವ ಘಟನೆ ಯಾದಗಿರಿಯ ಗಿರಿನಗರದಲ್ಲಿ ನಡೆದಿದೆ. ಬುದ್ದ ಜಂಗಮ ಸಮಾಜದ ವೆಂಕಟೇಶ್ ಎಂಬವರು ತಮ್ಮ ಕುಟುಂಬದೊಂದಿಗೆ ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಇತ್ತೀಚೆಗಷ್ಟೇ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಪುನರ್ ಪ್ರವೇಶ ಮಾಡಿರುವುದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

ವೆಂಕಟೇಶ್ ಅವರ ಜೀವನದಲ್ಲಿ ವಿಶಿಷ್ಟ ಸಂಗತಿಯೊಂದು ನಡೆದಿದೆ. ಕೆಲ ಸಮಯದಿಂದ ಅವರ ಕುಟುಂಬದ ಮೇಲೆ ನಿರಂತರ ಅಪಶಕುನುಗಳು ಸಂಭವಿಸುತ್ತಿದ್ದವು. ಜೀವನದಲ್ಲಿ ಶಾಂತಿ ಕಳೆದುಹೋಗಿತ್ತು. ಈ ಸಂದರ್ಭದಲ್ಲಿ ಕನಸಿನಲ್ಲಿ ಆಂಜನೇಯ ಸ್ವಾಮಿ ಪ್ರತ್ಯಕ್ಷನಾಗಿ, “ಹಿಂದೂ ಧರ್ಮಕ್ಕೆ ಮರಳಬೇಕು” ಎಂಬ ಸೂಚನೆ ನೀಡಿದರಂತೆ. ಈ ಧೈವಿಕ ಅನುಭವವೇ ಧರ್ಮಾಂತರದಿಂದ ಹಿಂದಕ್ಕೆ ಬರುವ ಪ್ರಮುಖ ಕಾರಣವಾಗಿದೆ ಎಂದು ವೆಂಕಟೇಶ್ ಹೇಳಿದ್ದಾರೆ.

ಹಿಂದೆ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ ಬಳಿಕ ಕುಟುಂಬಕ್ಕೆ ಅಸೌಖ್ಯ, ಆರ್ಥಿಕ ಸಂಕಷ್ಟ, ಮನಸಂಯಮ ಕಳೆದುಹೋದಂತಹ ಸಮಸ್ಯೆಗಳು ಹತ್ತಿರವಾಗಿದ್ದವು. ಈ ನಡುವೆ ವೆಂಕಟೇಶ್ ತೀವ್ರ ಸಂಕಟದಲ್ಲಿ ದುಡಿದುಕೊಳ್ಳುತ್ತಿದ್ದಾಗ, ಆಂಜನೇಯಸ್ವಾಮಿಯ ಕನಸುಗಳನ್ನು ನಿರಂತರವಾಗಿ ಕಾಣುತ್ತಿದ್ದರು. ಈ ಕನಸುಗಳಲ್ಲಿ ದೇವರು ಅವರು ಮಾಡಿರುವ ತಪ್ಪನ್ನು ತಿಳಿಸಿ, ಹಿಂದೂ ಧರ್ಮದತ್ತ ಮರಳಲು ಆದೇಶಿಸುತ್ತಿದ್ದರಂತೆ.

ಇದರಿಂದಾಗಿ ಇದೀಗ ವೆಂಕಟೇಶ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳೊಂದಿಗೆ ಹಿಂದೂ ಸಂಪ್ರದಾಯದಂತೆ ಶುದ್ಧಿಚರಣೆಯ ಮೂಲಕ ಹಿಂದೂ ಧರ್ಮ ಪ್ರವೇಶ  ಮಾಡಿಕೊಂಡಿದ್ದಾರೆ. ಅವರು ಸ್ಥಳೀಯ ಬ್ರಾಹ್ಮಣರ ನೇತೃತ್ವದಲ್ಲಿ ಪುನರ್ ಧರ್ಮ ಪ್ರವೇಶವನ್ನು ನೆರವೇರಿಸಿಕೊಂಡಿದ್ದು, ಹನುಮಾನ್ ಚಾಲಿಸಾ ಪಠಣದ ಮೂಲಕ ಧರ್ಮದ ಅನುಸರಣೆ ಆರಂಭಿಸಿದ್ದಾರೆ.

ಈ ಘಟನೆಯು ಧಾರ್ಮಿಕ ನಂಬಿಕೆ, ವೈಯಕ್ತಿಕ ಅನುಭವ ಹಾಗೂ ಸಮಾಜದಲ್ಲಿ ಧರ್ಮಾಂತರದ ಪರಿಣಾಮಗಳನ್ನು ಮತ್ತೆ ಮೆಲುಕು ಹಾಕಿಸುವಂತಾಗಿದೆ. ದೇವರ ನಂಬಿಕೆ ವ್ಯಕ್ತಿಗತವಾದರೂ, ಜನಜಾಗೃತಿಗೆ ಹೀಗೆ ಕೆಲವು ಘಟನೆಗಳು ಉದಾಹರಣೆಯಾಗಿ ನಿಲ್ಲುತ್ತವೆ.✍🏻✍🏻✍🏻

WhatsApp Image 2025-06-21 at 19.57.59
Trending Now