September 10, 2025
sathvikanudi - ch tech giant

ಉಡುಪಿ ಜಿಲ್ಲೆಯಲ್ಲಿ ಹೆಚ್ಚಾದ ಅಕ್ರಮ ಗಣಿಗಾರಿಕೆ ಪೊಲೀಸರಿಂದ ಅಮಾಯಕರ ಮೇಲೆ ಹಲ್ಲೆ, ಕೈ ಕಟ್ಟಿ ಕುಳಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು.

Spread the love

ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಉಡುಪಿ, ಬ್ರಹ್ಮಾವರ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್ ಅವರು ಗಣಿ ಮಾಲೀಕರೊಂದಿಗೆ ಸೇರಿ ಈ ಅಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ದಿನೇದಿನೆ ಹೆಚ್ಚುತ್ತಿರುವ ಅಕ್ರಮ ಗಣಿಗಾರಿಕೆಯಿಂದಾಗಿ ರಸ್ತೆಯಲ್ಲಿ, ಅನಾಧಿಕೃತವಾಗಿ ಕಲ್ಲು, ಜಲ್ಲಿ, ಮರಳು, ಮಣ್ಣು ಸಾಗಣೆ ಮಾಡುವ ಲಾರಿಗಳ ಸಂಚಾರ ಹೆಚ್ಚಾಗಿದ್ದು ಶಾಲಾ ವಾಹನಗಳಿಗೆ,ಅಂಬುಲೆನ್ಸ್ ಮತ್ತು ಸಾರ್ವಜನಿಕರ ವಾಹನಗಳಿಗೆ  ಹೆಚ್ಚು ಕಿರಿ ಕಿರಿ ಉಂಟಾಗಿದೆ.

ಲಾರಿ ಮಾಲೀಕರು ಪರವಾನಿಗೆ ಇಲ್ಲದೆ ಗಣಿಗಾರಿಕೆ ನಡೆಸುತಿದ್ದು ಇಲಾಖೆಯ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುತ್ತಿದ್ದಾರೆ  ಇಂತಹ ಅಕ್ರಮ ಚಟುವಟಿಕೆಗಳನ್ನು ಪ್ರಶ್ನಿಸಲು ಮುಂದಾದ ಸಾರ್ವಜನಿಕರನ್ನು ಗಣಿ ಮಾಲೀಕರು ದಬ್ಬಾಳಿಕೆ ನಡೆಸಿ ಬೆದರಿಕೆ ಹಾಕುತಿದ್ದಾರೆ ಎಂದು ತಿಳಿದು ಬಂದಿದೆ.

ಇಂತಹ ಅಕ್ರಮ ಚಟುವಟಿಕೆ ನಡೆಸುತ್ತಿರುವ ಮಾಲೀಕರ ಹತ್ತಿರ ,ವಿಧಿ ಇಲ್ಲದೆ ಕೆಲಸ ಮಾಡಿತ್ತಿರುವ ಮುಗ್ಧ ಲಾರಿ ಚಾಲಕರು ಕಾನೂನು ಸಮಸ್ಯೆಗಳಿಗೆ ಸಿಲುಕಿ ಒದ್ದಾಡುತಿದ್ದಾರೆ. ಆದರೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಮಾಲೀಕರುಗಳು ಮಾತ್ರ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಅಕ್ರಮ  ದಂದೆಕೋರರನ್ನ ಮುಟ್ಟಗೋಲು ಹಾಕಲು ನಿಷ್ಠಾವಂತ ಅಧಿಕಾರಿಗಳು ಉಡುಪಿ ಜಿಲ್ಲೆಗೆ ಅತ್ಯಾವಶ್ಯಕವಾಗಿದೆ ಮುಖ್ಯವಾಗಿ ಅಧಿಕಾರಿಗಳು ನಿಸ್ಪಕ್ಷಪಾತವಾಗಿ ಸೂಕ್ತ ಕ್ರಮ ಕೈಗೊಂಡರೆ ಅಕ್ರಮ ಗಣಿಗಾರಿಕೆಗೆ ಚಟುವಟಿಕೆಗೆ ಕಡಿವಾಣ ಹಾಕುವುದು ದೊಡ್ಡವಿಷಯವೇನಲ್ಲಾ.

ಉಡುಪಿ ಜಿಲ್ಲೆಯ ಗಣಿಅಧಿಕಾರಿಗಳು ದಂದೆಕೋರರೊಂದಿಗೆ ಕೈ ಜೋಡಿಸಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದು ಅವರ ಐಷಾರಾಮಿ ಜೀವನದ ಬಗ್ಗೆ ಪ್ರಶ್ನೆಸುವವರು ಯಾರು ಇಲ್ಲಾದಾಗಿದೆ. ಅಂತಹ ಲೂಟಿ ಕೊರರನ್ನು ಬಿಟ್ಟು ನಮ್ಮ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕ ಸರಕಾರದಲ್ಲಿ 42 ಇಲಾಖೆಗಳಿವೆ ಆದರೆ ಕೇವಲ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನು ಮಾತ್ರ ದಾಳಿ ನಡೆಸುತ್ತಿದ್ದಾರೆ ಎನ್ನುವುದು ವಿಪರ್ಯಾಸವೆ ಸರಿ, ಹಣ್ಣು ತಿಂದಾವನ ಬಿಟ್ಟು ಸಿಪ್ಪೆ ಹೆತ್ತಿ ಹಾಕಿದವನ್ನ ಹಿಡಿದ ಹಾಗೆ ಆಗಿದೆ ನಮ್ಮ ಕಾನೂನಿನ ವ್ಯವಸ್ಥೆ .

ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಗಳನ್ನು ಪರಿಶೀಲಿಸಿದರೆ, ಕೋಟಿಗಟ್ಟಲೆ ಲೂಟಿ ಮಾಡಿರುವ ಗಣಿ ಅಧಿಕಾರಿಗಳ ಅಕ್ರಮಗಳು ಬಹಿರಂಗವಾಗಬಹುದು.ನಮ್ಮ ಲೋಕಾಯುಕ್ತ ಅಧಿಕಾರಿಗಳು ನಿಜವಾದ ಲೂಟಿಕೋರರನ್ನು  ಹಿಡಿದು ಅವರಿಗೆ ಕಾನೂನು ಶಿಕ್ಷೆಗೆ ಒಳಪಡಿಸುವುದರಲ್ಲಿ ಆಸಕ್ತಿ ತೋರಿದರೆ ಉತ್ತಮವೆಂದು ಸಾರ್ವಜನಿಕರ ಅಕ್ಷೇಪವಾಗಿದೆ.

ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಗಣಿ ಮಾಲೀಕರಿಂದ  ಎಂಜಿಲ  ಹಣ (ಲಂಚ) ಪಡೆದು, ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬ ಆರೋಪವೂ ತಿಳಿದು ಬಂದಿದೆ. ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಗಣಿ ಮಾಲೀಕರನ್ನು  ಅಪರಾಧದಿಂದ ಬಚಾವು ಮಾಡವ ಉದ್ದೇಶದಿಂದ ಅಮಾಯಕ ದಲಿತ ಯುವಕರಮೇಲೆ ಕಾನೂನು ಕ್ರಮ ಜರುಗಿಸುವುದು ಹಲ್ಲೆ ಮಾಡುವುದು ಎಷ್ಟರಮಟ್ಟಿಗೆ ಸರಿ.

ಜಿಲ್ಲೆಯಲ್ಲಿ ನಿಷ್ಠಾವಂತ ಜಿಲ್ಲಾಧಿಕಾರಿಗಳು ಮತ್ತು ವರಿಷ್ಠ ಅಧಿಕಾರಿಗಳು ಇದ್ದರೂ, ಕೂಡ ಕೆಲವು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಅಕ್ರಮ ಚಟುವಟಿಕೆಯಲ್ಲಿರುವವರೊಂದಿಗೆ ಕೈ ಜೋಡಿಸಿರುವದರಿಂದ ಖದೀಮರಿಗೆ ಕಾನೂನಿನ ಭಯವಿಲ್ಲದೆ ಅವರ ದಂದೆಯನ್ನು ಮುಂದುವರಿಸುತ್ತಿದ್ದಾರೆ.

ಮೊನ್ನೆಯಷ್ಟೇ ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಗಳು ಮೂಲ ಅಪರಾಧಿಯನ್ನು ಬಿಟ್ಟು ರಸ್ತೆಯ ಬದಿಯಲ್ಲಿ ನಿಂತಿದ್ದ ಭಾಸ್ಕರ್ ಎನ್ನುವ ನಿರಪರಾದಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಹಲ್ಲೆಯಿಂದ ಆ ವ್ಯಕ್ತಿಯ ಆರೋಗ್ಯ ಗಂಭೀರವಾಗಿದೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಧಾಖಲಿಸಲು ವೈದ್ಯರು ಸೂಚಿಸಿದ್ದರು ಕೂಡ ದಲಿತನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಭಾಸ್ಕರ್ ಗಿಳಿಯಾರ್ ನನ್ನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ, ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಇನ್ನು ಮುಂದೆಯಾದರೂ ಕಾನೂನು ಭಾಹಿರ ಚಟುವಟಿಕೆ ನಡೆಯುತ್ತಿರುವ ಎಲ್ಲಾ ದಂದೆಕೊರರನ್ನು ಮತ್ತು ವಾಹನಕ್ಕೆ ಪರವಾನಗಿಯೇ ಇಲ್ಲದೆ ಕಾನೂನು ಭಾಹಿರವಾಗಿ ಬಳಸುತ್ತಿರುವ ಲಾರಿಗಳು ಹಾಗೂ ಕೃತ್ಯದಿಂದ ತಪ್ಪಿಸಿಕೊಳ್ಳಲು  ಅಮಾಯಕ ಲಾರಿ ಚಾಲಕರನ್ನು ಬಲಿ ನೀಡುತ್ತಿರುವ ಲಾರಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಜಿಲ್ಲೆಯ ಜನತೆಗೆ ನ್ಯಾಯವನ್ನು ಒದಗಿಸಿ ಕೊಡವರೆಂದು ಸಂಬಂಧ ಪಟ್ಟ ನಿಷ್ಠಾವಂತ ಅಧಿಕಾರಿಗಳಿಂದ ನ್ಯಾಯಕ್ಕಾಗಿ  ಎದುರು ನೋಡುತ್ತಿರುವ ನತದೃಷ್ಟ ಜಿಲ್ಲೆಯ ಸಾರ್ವಜನಿಕರು… ✍️

ವರದಿ: ಆರತಿ ಗಿಳಿಯಾರ್

ಉಡುಪಿ ಜಿಲ್ಲಾ ಅಧ್ಯಕ್ಷರು

ಕರ್ನಾಟಕ ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವರದಿಗಾರರ ಸಂಘ

WhatsApp Image 2025-06-21 at 19.57.59
Trending Now