
ಧರ್ಮಸ್ಥಳ ಎಂದು ಹೆಸರಾಗಿರುವ ಧಾರ್ಮಿಕ ತಾಣದಲ್ಲಿ ಬಹು ವರ್ಷಗಳಿಂದ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಭೀಕರ ಶವ ಹೂತ ಪ್ರಕರಣದಲ್ಲಿ ಇದೀಗ ಗಂಭೀರ ತಿರುವು ಪಡೆದಿದ್ದು, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ತನ್ನ ಕಾರ್ಯಚಟುವಟಿಕೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಭೀಕರ ಮತ್ತು ಮನ ಮಡಚುವಂತ ದೂರು ಇದೀಗ ಸರ್ಕಾರದ ಗಮನ ಸೆಳೆದಿದ್ದು, ಸತ್ಯಾಂಶ ಬಹಿರಂಗಗೊಳಿಸಲು ಎಸ್‌ಐಟಿ ತನಿಖೆ ಆರಂಭವಾಗಿದೆ.
ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದ ಎಸ್‌ಐಟಿ ತಂಡ ಈಗಾಗಲೇ ಧರ್ಮಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಕಳೆದ ಹಲವು ವರ್ಷಗಳಲ್ಲಿ ನಡೆದಿರುವ ನಾಪತ್ತೆ ಪ್ರಕರಣಗಳು, ಅನಾಮಧೇಯ ಶವ ಪತ್ತೆ ಪ್ರಕರಣಗಳು ಮತ್ತು ಹಳೆ ಕೊಲೆ ಪ್ರಕರಣಗಳ ಕಡತಗಳನ್ನು ಪರಿಶೀಲನೆಗೊಳಪಡಿಸುತ್ತಿದೆ. ಈ ತನಿಖೆಯಲ್ಲಿ ಧರ್ಮಸ್ಥಳದ ಕಪ್ಪು ಮುಖ ಬಹಿರಂಗಗೊಳ್ಳಲಿದೆಯೆ..? ಎಂಬ ನಿರೀಕ್ಷೆ ಮೂಡಿದೆ.
ಯಾವುದೇ ಪವಿತ್ರ ತಾಣದಲ್ಲಿ ಈ ಮಟ್ಟದ ಮಾರಣಹೋಮ ನಡೆದಿರಬಹುದು ಎಂಬುದು ಜನರ ಮನಸ್ಸಿಗೆ ಅಂಜಿಕೆ ಉಂಟುಮಾಡುತ್ತಿದೆ. ಮನುಷ್ಯರನ್ನು ಶವಗಳಾಗಿ ಹೂಳಿದ ಕ್ರೂರತೆ, ಇದನ್ನು ಇತ್ತಿಚೆಗೆ ಹರಿದಿರುವ ವಿಡಿಯೋ ಹೇಳಿಕೆಗಳ ಮೂಲಕ ಸಮಾಜದ ಮುಂದಿರಿಸಲಾಗಿದೆ. ಈ ವ್ಯಕ್ತಿಯ ಹೇಳಿಕೆಯು ಕೇವಲ ನಾಟಕವೋ ಅಥವಾ ಗಂಭೀರ ಸತ್ಯವೋ ಎಂಬುದನ್ನು ಸ್ಪಷ್ಟಗೊಳಿಸಲು ಎಸ್‌ಐಟಿ ತನಿಖೆ ಬಹುಮುಖ್ಯ.
ಬೆಳ್ತಂಗಡಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಿಶೇಷ ವಿಚಾರಣಾ ಕಚೇರಿಯನ್ನು ತೆರೆದು ತನಿಖೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಶಂಕಿತ ವ್ಯಕ್ತಿಗಳ ವಿವರಣೆಗಳನ್ನು ಸಂಗ್ರಹಿಸಿ ತನಿಖಾ ಚಕ್ರವೇ ವೇಗ ಪಡೆದುಕೊಂಡಿದೆ. ಅಲ್ಲದೇ, ಪ್ರಕರಣದ ಪ್ರಾಮಾಣಿಕತೆ ಖಚಿತಪಡಿಸಿಕೊಳ್ಳಲು ಐತಿಹಾಸಿಕ ದಾಖಲೆಗಳು, ಸಮಾದಿಯ ಸ್ಥಳ(grave site) ಪರಿಶೀಲನೆಯೂ ಮುಂದುವರಿದಿದೆ.
ಈಗಲೂ ಹಲವರು ಧರ್ಮಸ್ಥಳವನ್ನು ಅಕ್ಷರಶಃ ಭಯದ ನೆಲವೆಂದು ಪರಿಗಣಿಸುತ್ತಿದ್ದಾರೆ. ಶವ ಹೂತಿರುವ ಸ್ಥಳಗಳ ಪತ್ತೆ, ವೈಜ್ಞಾನಿಕ ಪರಿಶೀಲನೆ, ಭೌಗೋಳಿಕ ತಪಾಸಣೆ ಎಲ್ಲವೂ ತನಿಖೆಯಲ್ಲಿ ಪ್ರಾಮಾಣಿಕ ಸ್ಥಿತಿ ದಾಖಲಿಸಲು ಪ್ರಯತ್ನಿಸುತ್ತಿದೆ. ಸರಳವಾಗಿ ನೋಡಿದರೆ ಧರ್ಮಸ್ಥಳ ಎಂಬ ಪವಿತ್ರತೆಯ ಹಿಮ್ಮೆಟ್ಟಿನಲ್ಲಿ ಅದೆಷ್ಟೋ ಅಂಧಕಾರದ ಕತೆಗಳು ಸುಳಿಯುತ್ತಿರುವ ಸಾಧ್ಯತೆ ಬೆಳಕಿಗೆ ಬರುತ್ತಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರಕರಣ ಭಾರಿ ಸಂಚಲನ ಮೂಡಿಸಿದ್ದು, ಧರ್ಮಸ್ಥಳದ ಹೆಸರನ್ನು ಮುಚ್ಚಿಟ್ಟುಕೊಂಡು ನಡೆಯುತ್ತಿರುವ ಅಪರಾಧ ಬಹಿರಂಗಗೊಳ್ಳಬೇಕೆಂಬ ಜನಮತದ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡದ ಜವಾಬ್ದಾರಿ ಇನ್ನೂ ಹೆಚ್ಚು ಗಂಭೀರವಾಗಿದೆ. ಸತ್ಯವನ್ನು ಹೊರತೆಗೆಯುವ ಈ ಪ್ರಯತ್ನದಲ್ಲಿ ರಾಜಕೀಯ, ಧಾರ್ಮಿಕ ಒತ್ತಡಗಳ ನಡುವೆಯೂ ನ್ಯಾಯ ಮತ್ತು ನಿಷ್ಠೆಯ ಮಾರ್ಗದಲ್ಲಿ ಎಸ್ಐಟಿ (SIT) ಎಷ್ಟು ದೂರ ಸಾಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.
ಈ ಪ್ರಕರಣದ ನೈಜತೆಯನ್ನು ಹೊರತರುವುದರಿಂದ ಕೇವಲ ಧರ್ಮಸ್ಥಳವಲ್ಲ, ಇಡೀ ವ್ಯವಸ್ಥೆಯ ಮೇಲಿನ ನಂಬಿಕೆ ಪ್ರತಿಷ್ಠೆಗೆ ಸವಾಲು ಕೇಳಿಬರುತ್ತದೆ. ಇದು ಕೇವಲ ತನಿಖೆಯಲ್ಲ – ಇದು ಸತ್ಯಕ್ಕಾಗಿ ನಡೆಯುತ್ತಿರುವ ಪವಿತ್ರ ಯುದ್ಧವಾಗಿದೆ.
ಸದ್ಯಕ್ಕೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರುವ ಹೊತ್ತಿನಲ್ಲಿ, ಎಸ್‌ಐಟಿ ನಿಖರ ತನಿಖೆ ಹಾಗೂ ನ್ಯಾಯಾಲಯದ ಹಸ್ತಕ್ಷೇಪದ ಮೂಲಕ ಸತ್ಯಾವಶೇಷಗಳು ಹೊರಬೀಳುವುದು ಅನಿವಾರ್ಯವಾಗಿದೆ. ಇಡೀ ರಾಜ್ಯದ ಕಣ್ಣುಗಳು ಈಗ ಧರ್ಮಸ್ಥಳದತ್ತ ಹಾಗೂ ಎಸ್‌ಐಟಿ ತಂಡದ ದಿಕ್ಕಿನತ್ತ ತಿರುಗಿವೆ. ಶವಗಳ ನಡುವೆ ಮುಚ್ಚಿಹೋಗಿರುವ ಸತ್ಯಕ್ಕೆ ಈಗ ಅಂತ್ಯವೋ?
ಮುಂದಿನ ದಿನಗಳಲ್ಲಿ ಪುಣ್ಯ ಸ್ಥಳದಲ್ಲಿ ನಡೆದಿರುವ ಮರಣಹೋಮದ ಬಗ್ಗೆ ಮುಂದಿನ ನಿಷ್ಠಾವಂತ ಅಧಿಕಾರಿಗಳ ತನಿಖೆಯಲಲ್ಲಾದರೂ ಈ ಪುಣ್ಯಕ್ಷೇತ್ರದ ಅಪರಾಧ ದ ಪ್ರಕರಣಕ್ಕೆ ಒಂದು ಅಂತ್ಯ ಕಾಣಬಹುದೊ! ಏನೊ…? ✍🏻
🙏🏻ಸತ್ಯ ಮೇವ ಜಯತೇ 🙏🏻