October 23, 2025
sathvikanudi - ch tech giant

ನಂಜನಗೂಡು ತಾಲ್ಲೂಕಿನ ಯಾಲಹಳ್ಳಿಯಲ್ಲಿ ನಿನ್ನೆ ಚಿರತೆ ದಾಳಿ..

Spread the love

ಮೈಸೂರು

ನಂಜನಗೂಡು ತಾಲ್ಲೂಕಿನ ಯಾಲಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಘಟನೆಯಲ್ಲಿ ಚಿರತೆಯ ದಾಳಿಗೆ ವ್ಯಕ್ತಿ ಗಾಯಗೊಂಡಿದ್ದಾರೆ. ಜೈಕುಮಾರ್ ಎಂಬ ಗ್ರಾಮಸ್ಥನು ತನ್ನ ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಈ ದಾಳಿ ನಡೆದಿದ್ದು, ಆತನಿಗೆ ಗಂಭೀರ ಗಾಯಗಳಾಗಿವೆ. ಚಿರತೆ ಊರಿನತ್ತ ಬಂದ ತಕ್ಷಣ ಗ್ರಾಮಸ್ಥರಲ್ಲಿ ಭೀತಿ ಮೂಡಿದವು. ತಕ್ಷಣವೇ ಗ್ರಾಮಸ್ಥರು ತಮ್ಮ ರಕ್ಷಣೆಗೆ ತೊಡಗಿದ್ದು, ಚಿರತೆಯನ್ನು ಕಲ್ಲು ಹಾಗೂ ದೊಣ್ಣೆಗಳಿಂದ ತಡೆಯಲು ಪ್ರಯತ್ನಿಸಿದರು.

ಚಿರತೆಯ ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಚಿರತೆಯನ್ನು ಹಿಂಬಾಲಿಸಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಗಾಬರಿಗೊಂಡ ಚಿರತೆ ಹತ್ತಿರದಲ್ಲಿದ್ದ ಪಾಳು ಮನೆಗೆ ನುಗ್ಗಿದರೂ, ಅರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸಮನ್ವಯದಿಂದ ಕಾರ್ಯನಿರ್ವಹಿಸಿ ಚಿರತೆಯನ್ನು ಹಿಡಿಯಲು ಪ್ರಯತ್ನಿಸಿದರು. ಗಾಯಗೊಂಡ ಜಯಕುಮಾರ್ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಈ ಘಟನೆ  ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಸಹ ಭೀತಿಯ ವಾತಾವರಣ ಸೃಷ್ಟಿಸಿದೆ. ಅರಣ್ಯ ಇಲಾಖೆಯವರು ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತಕ್ಷಣವೇ ಕ್ರಮ ಕೈಗೊಂಡು . ಚಿರತೆಗಳನ್ನು ಹಿಡಿಯಲು ಮತ್ತು ಗ್ರಾಮಸ್ಥರ ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ತಿಳಿದು ಬಂದಿದೆ.

WhatsApp Image 2025-06-21 at 19.57.59
Trending Now