
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಜಮಖಂಡಿ ಇದರ ಜನ ಮಂಗಳ ಕಾರ್ಯಕ್ರಮದಡಿ ಇಂದು ಬನಹಟ್ಟಿ ವಲಯದ ಸೋಮವಾರ ಪೇಟೆ ಕಾರ್ಯಕ್ಷೇತ್ರದಲ್ಲಿ ವಾಟರ್ ಬೆಡ್ ವಿತರಣೆಯು ನಡೆದಿತು.
ಬನಹಟ್ಟಿ ಗ್ರಾಮದ ಬಂಗಾರೆವ್ವ ಹಟ್ಟಿ ಎಂಬವರು ಕಳೆದ ಮೂರು ವರ್ಷಗಳಿಂದ ವಯೋ ಸಹಜ ಖಾಯಿಲೆಯಿಂದ ಬಾಧೆಪಟ್ಟು ಹಾಸಿಗೆ ಹಿಡಿದು ಮಲಗಿದ ಸ್ಥಿತಿಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಹಾಸಿಗೆದಲ್ಲೇ ಮಲಗಿರುವುದರಿಂದ ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗಬಾರದೆಂದು, ಆರೋಗ್ಯಪೂರ್ಣ ಮತ್ತು ಆರಾಮದಾಯಕ ವಾತಾವರಣ ಕಲ್ಪಿಸುವ ಸಲುವಾಗಿ ಅವರಿಗೆ ವಿಶೇಷ ವಾಟರ್ ಬೆಡ್ ವಿತರಿಸಲಾಯಿತು.
ಈ ಸಮಾಜಮುಖಿ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳು ಹಾಗೂ ಬನಶಂಕರಿ ಸ್ವ ಸಹಾಯ ಸಂಘದ ಸದಸ್ಯರು ಸಂಯುಕ್ತವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಬನಹಟ್ಟಿ ವಲಯ ಮೇಲ್ವಿಚಾರಕರಾದ ಶಿವಾನಂದ M.Y ಮತ್ತು ಸೇವಾಪ್ರತಿನಿಧಿ ಗೀತಾ ಶಿಂಘೆ ಅವರು ಉಪಸ್ಥಿತರಿದ್ದು, ಪಲಾನುಭವಿಗೆ ಬೆಡ್ ಹಸ್ತಾಂತರಿಸಿದರು.