September 10, 2025
sathvikanudi - ch tech giant

ಕಾಲಕ್ರಮೇಣ ಕಿರಿದಾಗುತ್ತಿರುವ  ಕೆರೆ ಕಟ್ಟೇಗಳು…..! ಭೂ ಗಳ್ಳರ ಅಟ್ಟಹಾಸ….

Spread the love

ಮಂಡ್ಯ :

ಮದ್ದೂರು ಗ್ರಾಮದಲ್ಲಿ ಪಂಚಾಯತಿ ವ್ಯಾಪ್ತಿಯ ಕೆರೆ ಒತ್ತುವರಿ ತೆರವು ಕಾರ್ಯಕ್ರದಲ್ಲಿ ಮೈಸೂರು ಉಪ ವಿಭಾಗಾಧಿಕಾರಿ ಕೆ. ಆರ್. ರಕ್ಷಿತ್ ನೇತೃತ್ವದಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಸರ್ವೇ ನಂಬರ್ 185, 186, 187 ನಲ್ಲಿನ ಸರ್ಕಾರಿ ಕೆರೆಗಳನ್ನು  ಅಕ್ರಮವಾಗಿ ಒತ್ತುವರಿ ಮಾಡಿರುವರ ವಿರುದ್ಧ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕಂದಾಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ , ಪೊಲೀಸ್ ಭದ್ರತೆಯೊಂದಿಗೆ ಅನುಷ್ಠಾನಗೊಳಿಸಿದ ಕಂದಾಯ ಅಧಿಕಾರಿಗಳು ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಖಾನೂನೂ ವ್ಯವಸ್ಥೆಗೆ ಗೌರವ ವ್ಯಕ್ತಪಡಿಸಿದ್ದಾರೆ ಆದರೆ ಸಮುದಾಯದ ಜನರು ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ಆಕ್ರಮಣ ಮಾಡುವ ಅಹಂಕಾರಿಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಹೊತ್ತಾಯಿಸಿದ್ದಾರೆ.

ಸರ್ಕಾರಿಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸರ್ಕಾರಕ್ಕೆ ಸೇರಿದ ಆಸ್ತಿ ರಕ್ಷಣೆ, ಸಾರ್ವಜನಿಕ ಹಿತಕ್ಕಾಗಿ ಮಾತ್ರವಲ್ಲದೆ, ನ್ಯಾಯ ಮತ್ತು ಸಮಾನತೆಗೆ ಸಂಬಂಧಪಟ್ಟ ವಿಷಯಗಳಲ್ಲಿಯೂ ಮಹತ್ವಪೂರ್ಣವಾಗಿದೆ. ಇದು ಮುಂದಿನ ದಿನಗಳಲ್ಲಿ ಸರ್ಕಾರದ ನೈತಿಕ ಮತ್ತು ಕಾನೂನು ಬದ್ಧತೆಗೆ ಅರಿವನ್ನು ಮೂಡಿಸುತ್ತದೆ.

WhatsApp Image 2025-06-21 at 19.57.59
Trending Now