September 9, 2025
sathvikanudi - ch tech giant

ಅಸ್ವಸ್ಥಗೊಂಡ ಅಪರಿಚಿತ ವ್ಯಕ್ತಿ ಸಾವು – ಪೊಲೀಸ್ ಇಲಾಖೆಯಿಂದ ಅಂತ್ಯಕ್ರಿಯೆ..!?

Spread the love



ಬೀಳಗಿ: ತಾಲ್ಲೂಕಿನ ಯಡಹಳ್ಳಿ ಗ್ರಾಮದ ಗಲಗಲಿ ರಸ್ತೆಯ ಬಳಿ ಏಪ್ರಿಲ್ 9ರಂದು ಬೆಳಿಗ್ಗೆ ಅಂದಾಜು 45 ರಿಂದ 50 ವರ್ಷದ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಈ ಮಾಹಿತಿಯನ್ನು ಪಡೆದ ಸಾರ್ವಜನಿಕರೊಬ್ಬರು ತಕ್ಷಣವೇ ಆತನನ್ನು ಅಂಬುಲೆನ್ಸ್ ಮೂಲಕ ಬೀಳಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು.

ಆದರೆ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಸೂಕ್ತ ಚಿಕಿತ್ಸೆ ನೀಡಲಾಗಿದ್ರೂ, ಆ ವ್ಯಕ್ತಿಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ದುರದೃಷ್ಟವಶಾತ್ ಏಪ್ರಿಲ್ 10 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿದ್ದಾನೆ.

ಘಟನೆ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 13/2025 ಅನ್ನು ಭಾರತೀಯ ದಂಡಸಂಹಿತೆಯ ಕಲಂ 194 BNS ಅಡಿಯಲ್ಲಿ ದಾಖಲಿಸಲಾಗಿದೆ.

ಮೃತ ವ್ಯಕ್ತಿಯ ಕುರಿತು ಯಾವತ್ತೂ ಸರಿಯಾದ ಗುರುತು ಅಥವಾ ಕುಟುಂಬದ ಮಾಹಿತಿ ಲಭಿಸದ ಹಿನ್ನಲೆಯಲ್ಲಿ, ಪೊಲೀಸ್ ಇಲಾಖೆ ಅವರ ಅಂತ್ಯಕ್ರಿಯೆಯನ್ನು ಮಾಡಬೇಕಾದ ಅನಿವಾರ್ಯತೆಯಾಯಿತು. ಆದ್ದರಿಂದ ಭಾನುವಾರ, ಬಾಗಲಕೋಟೆ ಸಮೀಪದ ಮಲ್ಲಾಪುರ ಮುನ್ಸಿಪಾಲಿಟಿ ಯಾರ್ಡ್ ನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಸರಕಾರದ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭ ಬೀಳಗಿ ಠಾಣೆಯ ಎಎಸ್‌ಐ ಎನ್.ಆರ್. ಪಾಟೀಲ, ಹೆಡ್ ಕಾನ್ಸ್ಟೇಬಲ್ ಸದಾಶಿವ ದಳವಾಯಿ, ಕಾನ್ಸ್ಟೇಬಲ್ ಬಾಬು ಹುಡೇದ, ನಾಗರಾಜ ಜಟ್ಟನ್ನವರ ಹಾಗೂ ನಗರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪೋಲೀಸರು ಮಾನವೀಯತೆ ಮೆರೆದಿದ್ದು, ವಾರಸುದಾರರ ಅಭಾವದಲ್ಲಿಯೂ ಶ್ರದ್ಧಾಭಕ್ತಿಯಿಂದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

WhatsApp Image 2025-06-21 at 19.57.59
Trending Now