September 10, 2025
sathvikanudi - ch tech giant

ಅಂಗನವಾಡಿ ಕಾರ್ಯಕರ್ತರ ಕುಂದು ಕೊರತೆ ಪರಿಶೀಲನೆ ಮಾಡಿದ ಶಾಸಕರು!?

Spread the love


ಹಾಸನ
ಆಲೂರು:ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕುಂದುಕೊರತೆ ಸಭೆಯನ್ನು ಆಯೋಜಿಸಲಾಗಿತ್ತು ಎಲ್ಲಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪರಿಹರಿಸುವಂತಹ ಕೆಲಸ ಮಾಡುವುದಾಗಿ ಶಾಸಕರಾದ ಸಿಮೆಂಟ್ ಮಂಜು ಅವರು ತಿಳಿಸಿದರು.

ಇದೇ ಮೊದಲ ಬಾರಿಗೆ ನಮ್ಮ ಸಮಸ್ಯೆಯನ್ನು ಕೇಳಲು ಮುಂದಾಗಿರುವ ಶಾಸಕರಿಗೆ ಅಂಗನವಾಡಿ ಕಾರ್ಯಕರ್ತೆಯರು ಶ್ಲಾಘನೆ ವ್ಯಕ್ತಪಡಿಸಿದರು, ನಂತರ ಕಾರ್ಯಕರ್ತೆಯರ ಸಮಸ್ಯೆಗಳಲ್ಲಿ ಮುಖ್ಯವಾಗಿ ಅಧಿಕ ಕೆಲಸದೊತ್ತಡ,ಮೂಲ ಸೌಕರ್ಯಗಳಾದ ಕಟ್ಟಡ,ಕುಡಿಯುವ ನೀರು,ವಿದ್ಯುತ್, ಪಠ್ಯ ಹಾಗೂ ಪೀಠೋಪಕರಣ, ಪೌಷ್ಠಿಕ ಆಹಾರ,ಗರ್ಭಿಣಿ ಬಾಣಂತಿಯರಿಗೆ ಆಹಾರ ಕಿಟ್ ಜೊತೆಗೆ ಅವರ ಭಯೋಮೆಟ್ರಿಕ್ ಸಮಸ್ಯೆ ಮತ್ತು ಕೆಲಸ ಮಾಡಿಸಿಕೊಂಡು ಅಂಗನವಾಡಿ ಕಾರ್ಯಕರ್ತೆಯರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ನಮಗೆ ಕೆಲಸ ಮಾಡಲು ಹಿಂಜರಿಕೆಯುಂಟು ಮಾಡಿದೆ ಎಂದು ಶಾಸಕರಲ್ಲಿ ತಮ್ಮ ನೋವನ್ನು ಮುಂದಿಟ್ಟರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ತಮ್ಮೇಲ್ಲ ಸಮಸ್ಯೆಗಳನ್ನು ತಿಳಿಯುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿದೆ ಇನ್ನೂ ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಸಭೆಯನ್ನು ಮಾಡಿದರೆ  ಮಾತ್ರ ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ ಹಾಗಾಗಿ ನಮ್ಮ ಕ್ಷೇತ್ರದಲ್ಲಿ ಇಂತಹ ಸಭೆಯನ್ನು ಮಾಡಲು ಮುಂದಾಗಿದ್ದೇವೆ ಎಂದರು.

ಈ ಸಂಧರ್ಭದಲ್ಲಿ ಡಿಸಿಪಿಒ ಧರಣೇಶ್. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯ. ಸಿಡಿಪಿಒ ಏ.ಟಿ ಮಲ್ಲೇಶ್.ಹಾಗೂ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ :✍🏻ಯೊಗೇಶ್ ಹಾಸನ ಜಿಲ್ಲೆ

WhatsApp Image 2025-06-21 at 19.57.59
Trending Now