September 9, 2025
sathvikanudi - ch tech giant

Bangalore crime: ಅಮ್ಮನ ಅಶ್ಲೀಲ ಫೋಟೋ ಕಳುಹಿಸಿ ಮಗಳ ಬ್ಲ್ಯಾಕ್‌ಮೇಲ್, ದೂರು ದಾಖಲು.

Spread the love

ಬೆಂಗಳೂರಿನಲ್ಲಿ ಯುವತಿಯೊಬ್ಬರ ತಾಯಿ ನಗ್ನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಸಿ ಯುವತಿ ಚಿತ್ರಗಳನ್ನು ಪಡೆದಿದ್ದ ವ್ಯಕ್ತಿ ವಿರುದ್ದ ಮೊಕದ್ದಮೆ ದಾಖಲಾಗಿದೆ.

ಬೆಂಗಳೂರು: ಮಹಿಳೆಯೊಬ್ಬರ ಅಶ್ಲೀಲ ಫೋಟೊ ಸೃಷ್ಟಿಸಿ ಅವರ ಮಗಳಿಗೆ ಕಳುಹಿಸಿ, ಯುವಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನೊಬ್ಬನ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 18 ವರ್ಷದ ಯುವತಿ ಈ ಯುವಕನ ವಿರುದ್ಧ ದೂರು ನೀಡಿದ್ದಾರೆ. ಅಪರಿಚಿತ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಯುವತಿಯ ಇನ್‌ಸ್ಟಾಗ್ರಾಂ ಖಾತೆಗೆ 2023ರ ಸೆಪ್ಟೆಂಬರ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಸಂದೇಶ ಬಂದಿರುತ್ತದೆ. ಈತ ಯುವತಿಯ ತಾಯಿಯ ಫೋಟೊವನ್ನು ಅಶ್ಲೀಲವಾಗಿ ಸೃಷ್ಟಿಸಿ ಕಳುಹಿಸಿದ್ದ. ಇದರಿಂದ ಬೆದರಿದ ಯುವತಿ ಫೋಟೊವನ್ನು ತೆಗೆದು ಹಾಕುವಂತೆ ಮನವಿ ಮಾಡಿ ಕೊಂಡಿದ್ದಾರೆ. ಆದರೆ ಅಪರಿಚಿತ ಈ ಮನವಿಗೆ ಒಪ್ಪಿರಲಿಲ್ಲ.ಈ ಯುವಕ ಮತ್ತೆ ಯುವತಿಗೆ ಸಂದೇಶ ಕಳುಹಿಸಿ ನಿನ್ನ ನಗ್ನ ಫೋಟೊಗಳನ್ನು ಕಳುಹಿಸು ಎಂಬ ಬೇಡಿಕೆ ಇರಿಸುತ್ತಾನೆ. ಒಂದುವೇಳೆ ಕಳುಹಿಸದಿದ್ದರೆ ನಿನ್ನ ತಾಯಿಯ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಮತ್ತೆ ಬೆದರಿಸುತ್ತಿರುತ್ತಾನೆ.ಅಮ್ಮನ ಗೌರವ ಉಳಿಸಲು ಈ ಯುವತಿ ತನ್ನ ನಗ್ನ ಫೋಟೊಗಳನ್ನು ಕಳುಹಿಸಿದ್ದು, ಆ ಯುವಕ ಈ ಫೋಟೊಗಳನ್ನು ತನ್ನ ಮಿತ್ರರಿಗೆ ಕಳುಹಿಸಿದ್ದ. ಇಷ್ಟಕ್ಕೇ ಸುಮ್ಮನಾಗದೇ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಈತನ ಕಿರುಕುಳದಿಂದ ಬೇಸತ್ತ ಯುವತಿ, ಪೋಷಕರಿಗೆ ವಿಷಯ ತಿಳಿಸಿ ನಂತರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಅಪರಿಚಿತನನ್ನು ಪತ್ತೆ ಮಾಡಲು ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

WhatsApp Image 2025-06-21 at 19.57.59
Trending Now