September 9, 2025
sathvikanudi - ch tech giant

ಬೀದರ್ ದರೋಡೆಯ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ…!?

Spread the love

ಮಂಗಳೂರು :
ಬೀದರ್‌ನಲ್ಲಿ ನಡೆದ ಬ್ಯಾಂಕ್  ಮಂಗಳೂರಿನಲ್ಲಿ ಇನ್ನೊಂದು ದುರಂತ banking ದರೋಡೆ ನಡೆದಿದೆ. ಮಂಗಳೂರಿನ ಉಳ್ಳಾಲದಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗೆ ಐವರು ದರೋಡೆಕೋರರ ತಂಡವು ನುಗ್ಗಿ, ಜನರಿಗೆ ಬಂದೂಕು ತೋರಿಸಿ ಚಿನ್ನ, ನಗದು, ಹಾಗೂ ಬೆಲೆಬಾಳುವ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಘಟನೆ ವೇಳೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಆತಂಕಕ್ಕೆ ಒಳಗಾದರು. ದರೋಡೆ ನಡೆಸಿದ ತಂಡವುದರೋಡೆಗೆ ಬಳಸಿದ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದರು , ಸ್ಥಳೀಯರು ದೂರು ನೀಡಿದ ನಂತರ . ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬೆರಳಚ್ಚು ಕಂಡು ಹಿಡಿಯುವ ಮೂಲಕ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

ಈ ದರೋಡೆಕೋರರ ಚಟುವಟಿಕೆ ಬೀದರ್‌ನ ಘಟನೆಯೊಂದಿಗೆ ಸಂಬಂಧಿತವೇ ಎಂಬುದು ಹಾಗೂ ಕೃತ್ಯದ ಹಿಂದೆ ಯಾರು ಎಂಬುದು ತಿಳಿಯಲು ತನಿಖೆ ಮುಂದುವರಿಯುತ್ತಿದೆ.

WhatsApp Image 2025-06-21 at 19.57.59
Trending Now